ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಜೇಶ್ವರ: ಆಕ್ರಮ ದಾಸ್ತಾನಿರಿಸಿದ್ದ 500 ಲೋಡು ಮರಳು ವಶ

ಮಂಜೇಶ್ವರ: ಆಕ್ರಮ ದಾಸ್ತಾನಿರಿಸಿದ್ದ 500 ಲೋಡು ಮರಳು ವಶ

Wed, 24 Feb 2010 03:08:00  Office Staff   S.O. News Service

ಮಂಜೇಶ್ವರ, ಫೆಬ್ರವರಿ ೨೪: ಕರ್ನಾಟಕ ಕೇರಳ ಗಡಿ ಪ್ರದೇಶವಾದ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿದೆಡೆಗಳಲ್ಲಿ ಅನಧಿಕೃತವಾಗಿ ದಾಸ್ತಾನಿರಿಸಿದ್ದ ೫೦೦ ಲೋಡರಷ್ಟು ಅನಧಿಕೃತ ಮರಳನ್ನು ಕಾಸರಗೋಡು ತಹಶೀಲ್ದಾರ್ ದಾಮೋದರನ್ ನೇತೃತ್ವದಲ್ಲಿ ಮುಟ್ಟುಗೋಳು ಹಾಕಿದ ಘಟನೆ ಇಂದು ನಡೆದಿದೆ.

 

 

24-mnj2.jpg

 

ಕಳೆದ ದಿನ ಅನಧಿಕೃತ ಮರಳು ಮಾಫಿಯಾದ ಬಗ್ಗೆ ಕೇರಳದ ಇಂಟೆಲಿಜನ್ಸ್ ಸರಕಾರಕ್ಕೆ ವರದಿ ಸಲ್ಲಿಸಿದ್ದು ಈ ಹಿನ್ನಲೆಯಲ್ಲಿ ರಾಜ್ಯ ಮುಖ್ಯಮಂತ್ರಿ ವಿ.ಎಸ್ ಅಚ್ಚುತಾನಂದನ್ ಮರಳು ಮಾಫಿಯಾ ವಿರುದ್ದ ಕಠಿಣ ಕ್ರಮ ಕೈಗೊಳ್ಲುವಂತೆ ನಿರ್ದೇಶ ನೀಡಿದ್ದರು, ಜಿಲ್ಲಾಧಿಕಾರಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಠಾಣಾಧಿಕಾರಿಗಳಿಗೆ ಅಕ್ರಮ ಮರಳು ದಾಸ್ತಾನು ಕುರಿತಂತೆ ವರದಿ ಸಲ್ಲಿಸಲು ಆದೇಶ ನೀಡಿದ್ದು ಮಂಜೇಶ್ವರ ಠಾಣಾಧಿಕಾರಿ ವಿ.ಮನೋಜ್ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು .ಇಂದು ಜಿಲ್ಲಾ ತಹಶೀಲ್ದಾರ್ ನೇತೃತ್ವದಲ್ಲಿ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಧರ್ಮನಗರ, ಕಜೆ,ಪಾತೂರು,ಬಾಕ್ರಬೈಲು ಸೇರಿದಂತೆ ವಿವಿಧೆಡೆಗಳಲ್ಲಿ ದಾಸ್ತಾನಿರಿಸಿದ್ದ ಸುಮಾರು 500 ರಷ್ಟು ಲೋಡು ಮರಳನ್ನು ದಸ್ತಗಿರಿ ಮಾಡಿದ್ದಾರೆ.

 

ಈ ಮರಳನ್ನು ವರ್ಕಾಡಿ ಗ್ರಾಮ ಪಂಚಾಯತ್ ಕಚೇರಿ ಬಳಿ ದಾಸ್ತಾನಿರಿಸಲಾಗಿದೆ.ಕಾರ್ಯಾಚರಣೆಯಲ್ಲಿ ಮಂಜೇಶ್ವರ ಅಡೀಶನಲ್ ಎಸ್.ಐ ಕರುಣಾಕರನ್ ಕಾರ್ಯಾಚರಣೆಯಲ್ಲಿದ್ದರು.

 

 

ಚಿತ್ರ, ವರದಿ: ಆರಿಫ್, ಮಂಜೇಶ್ವರ


Share: