ನಾಮಪತ್ರ ತಿರಸ್ಕಾರ: ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ದೂರು
ಸುಳ್ಯ, ಮೇ.3: ಪಂಜ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ನಾಮಪತ್ರವನ್ನು ವಿನಾ ಕಾರಣ ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾಂಗ್ರೆಸ್ ನಾಯಕ ಎಂ.ವೆಂಕಪ್ಪ ಗೌಡ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪಂಜ ಗ್ರಾ.ಪಂ. ಚುನಾವಣೆಯಲ್ಲಿ ರಾಜೇಶ್ ಕಂಬಳ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಯಾವುದೇ ಆರೋಪ ಗಳಿಲ್ಲದೆ ನಾಮಪತ್ರ ಸ್ವೀಕತಿಯಾಗಿದ್ದು, ಪರಿಶೀಲನೆಯ ವೇಳೆಯು ಸಿಂಧುವಾಗಿತ್ತು. ಆದರೆ ನಾಮಪತ್ರ ಪರಿಶೀಲನೆ ಅವಧಿ ಮುಗಿದು 1 ಗಂಟೆಯ ಬಳಿಕ ಚುನಾವಣಾಧಿಕಾರಿ ಅಭ್ಯರ್ಥಿ ಯನ್ನು ಬರಹೇಳಿ ನಾಮಪತ್ರ ತಿರಸ್ಕರಿಸಿದ್ದಾರೆ. ಅಲ್ಲದೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದಿದ್ದಾರೆ. ಅವರ ಮನೆಯವರ 8 ಹೆಸರು ಕೂಡಾ ಮತದಾರರ ಪಟ್ಟಿಯಿಂದ ‘ಡಿಲೀಟ್’ ಆಗಿರುವುದಾಗಿ ಹೇಳಿದ್ದಾರೆ. ಈ ಅನ್ಯಾಯದ ವಿರುದ್ಧ ರಾಜೇಶ್ ಕಂಬಳ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ವೆಂಕಪ್ಪ ಗೌಡ ಹೇಳಿದರು.
ಈ ಸಮಸ್ಯೆ ಕುರಿತು ಚುನಾವಣಾ ಆಯೋಗ ದಿಂದ ಸೂಕ್ತ ಸ್ಪಂದನೆ ಬಾರದಿದ್ದಲ್ಲಿ ಬಳಿಕ ಚುನಾವಣಾ ತಕರಾರು ಅರ್ಜಿ ಸಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದರು.
ಕಲ್ಮಕಾರಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಮೇಲೆ ಬಿಜೆಪಿಯವರು ಹಲ್ಲೆ ನಡೆಸಿ, ಗಾಯಗೊಳಿ ಸಿದಲ್ಲದೆ ಬಳಿಕ ಅವರನ್ನೆ ಗುರಿಯಾಗಿಸಿ ದಲಿತ ನಿಂದನೆಯ ಸುಳ್ಳು ಪ್ರಕರಣ ಸಷ್ಟಿಸಿದ್ದಾರೆ. ನೆಲ್ಲೂರು ಕೆಮ್ರಾಜೆಯಲ್ಲಿ ನಮ್ಮ ಅಭ್ಯರ್ಥಿಯ ನಾಮಪತ್ರವನ್ನು ಬಲತ್ಕಾರದಿಂದ ವಾಪಸು ಪಡೆಯಲಾಗಿದೆ ಎಂದು ವೆಂಕಪ್ಪ ಗೌಡ ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭರತ್ ಮುಂಡೋಡಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಗೋಕುಲ್ ದಾಸ್, ಟಿ.ಎಂ. ಶಹೀದ್, ಸುಧೀರ್ ರೈ, ರಾಜೇಶ್ ಕಂಬಳ ಪತ್ರಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸರ್ಕಲ್‌ಗೆ ಮನವಿ: ಬಳಿಕ ಸುಳ್ಯ ಸರ್ಕಲ್ ಇನ್‌ಸ್ಪಕ್ಟರ್‌ರಿಗೆ ಮನವಿ ಸಲ್ಲಿಸಿದ ನಿಯೋಗವು ಶಾಂತಿ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಮನವಿ ಮಾಡಿತು.