ಗಂಗೊಳ್ಳಿ : ದಿನಾಂಕ ೦೪/೧೨/೦೯ ರಂದು ಸಂಜೆ ೦೫:೪೫ ಗಂಟೆಗೆ ತಬ್ರೇಜ್ (೨೫ವರ್ಷ) ತಂದೆ: ಖಾಜಾ ಬಾವುದ್ದೀನ್ ವಾಸ:ಜೆ.ಎಮ್ . ರೋಡ್ ಗಂಗೊಳ್ಳಿ ಕಸಬಾ ಗ್ರಾಮ, ಕುಂದಾಪುರ ತಾಲೂಕು. ಇವರು ಮತ್ತು ಇಹಾಬ್‌ರವರು ಎಸ್. ವಿ. ಕಾಲೇಜಿಗೆ ಕಾಲೇಜ್ ಡೇ ಕಾರ್ಯಕ್ರಮಕ್ಕೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಎಸ್. ವಿ. ಕಾಲೇಜು ಗೇಟಿನ ಎದುರು ತಿರುವಿನಲ್ಲಿ ಬರುವಾಗ ಅವರ ಪರಿಚಯದ ಮನೋಜ್ ಪೂಜಾರಿ ಮತ್ತು ಇತರರು ಕೆಎ ೨೦ ಡಬ್ಲು ೨೩೮೬ ಬೈಕ್‌ನಲ್ಲಿ ಅಡ್ಡ ಹಾಕಿ ತಾಗಿಸಿ ಕೆನ್ನೆಯ ಮೇಲೆ ಹೊಡೆದು, ಗಾಡಿಯನ್ನು ಅಡ್ಡ ಹಾಕಿ ಬೈಕಿನ ಗ್ಲಾಸನ್ನು ಒಡೆದು ಬೈದುದಾಗಿದೆ ಈ ಬಗ್ಗೆ ತಬ್ರೇಜ್ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೧೪/೦೯ ಕಲಂ ೩೪೧,೩೨೩,೪೨೭, ೫೦೪ ಜೊತೆಗೆ ೩೪ ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಆರೋಪಿಯ ದಸ್ತಗಿರಿಯಾಗದೇ ಇರುವುದರಿಂದ ಹೆಚ್ಚಿನ ವಿವರ ತಿಳಿದುಬಂದಿರುವುದಿಲ್ಲ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ ೦೪/೧೨/೦೯ರಂದು ಮನೋಜ್ ಕುಮಾರ್ ಲೈಟ್ ಹೌಸ್ ಗಂಗೊಳ್ಳಿ ಎಂಬವರು ತಮ್ಮ ಬೈಕಿನಲ್ಲಿ ಎಸ್.ವಿ ಜ್ಯೂನಿಯರ್ ಕಾಲೇಜಿನ ಕಾಲೇಜ್ ಡೇ ಕಾರ್ಯಕ್ರಮಕ್ಕೆ ಹೋಗುವಾಗ ತಬ್ರೇಜ್ ಮತ್ತು ತಫಾನ್ ರವರು ತಮ್ಮ ಬಜಾಜ್ ಪಲ್‌ಸರ್ ಬೈಕನ್ನು ಅವರ ಬೈಕಿಗೆ ತಾಗಿಸಿ ಡಿಕ್ಕಿ ಹೊಡೆಸಿದಕ್ಕೆ ನೋಡಿ ಹೋಗಲು ಆಗುವುದಿಲ್ಲವೇ ಎಂದು ಹೇಳಿದಕ್ಕೆ, ಅವರು ತಾಯಿಯ ಜೊತೆಗೆ ಪೇಟೆಗೆ ಅಂಗಡಿಗೆ ಸಾಮಾನು ತರಲು ಬರುವಾಗ ತಬ್ರೇಜ್ ತನ್ನ ತಂದೆ ಖಾಜಾ ಸಾಹೇಬ್ ಮೇಲ್ ಗಂಗೊಳ್ಳಿರವರು ಸೇರಿಕೊಂಡು ಗಂಗೊಳ್ಳಿಯ ಮುಖ್ಯ ರಸ್ತೆಯಲ್ಲಿರುವ ಹರಕೋಟ್ ಕಾಂಪ್ಲೇಕ್ಸ್ ಎದುರುಗಡೆ ಸಂಜೆ ಗಂಟೆ ೦೬:೦೦ ಗೆ ಅಕ್ರಮವಾಗಿ ತಡೆದು ನೀನು ಭಾರಿ ಹಾರಾಡುತ್ತೀಯಾ ಇನ್ನು ಮೇಲೆ ನಮ್ಮ ಎದುರು ಮಾತಾನಾಡಿದರೆ ಜಾಗೃತೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಈ ಬಗ್ಗೆ ಮನೋಜ್ ಕುಮಾರ್ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೧೫/೦೯ ಕಲಂ ೩೪೧, ೫೦೬ ಜೊತೆಗೆ ೩೪ ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ದಸ್ತಗಿರಿಯಾಗದೇ ಇರುವುದರಿಂದ ಹೆಚ್ಚಿನ ವಿವರ ತಿಳಿದುಬಂದಿರುವುದಿಲ್ಲ.
ವರದಿ: ಇಬ್ರಾಹಿಂ, ಗಂಗೊಳ್ಳಿ