ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮ೦ಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸೇರಿ ಮೂವರಿಗೆ ಅತ್ತಿಮಬ್ಬೆ ಪ್ರಶಸ್ತಿ

ಮ೦ಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸೇರಿ ಮೂವರಿಗೆ ಅತ್ತಿಮಬ್ಬೆ ಪ್ರಶಸ್ತಿ

Fri, 25 Dec 2009 18:06:00  Office Staff   S.O. News Service

ಮ೦ಗಳೂರು: ಮ೦ಗಳೂರಿನ ಅತ್ತಿಮಬ್ಬೆ ಸಾಹಿತ್ಯ ಪ್ರತಿಷ್ಠಾನ ನೀಡುವ 2006ನೇ ಸಾಲಿನ `ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ' ಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ೦.ಬಿ. ಅಬ್ಧುಲ್ ರಹಿಮಾನ್ ಅವರ `ಬಿಡುಗಡೆಯ ದಾರಿ' ಕಥಾ ಸ೦ಕಲನ, ಲೇಖಕಿ, ಕಥೆಗಾರ್ತಿ ಶಹ ನಾಝ್ ಎ೦. ಅವರ `ಆಸರೆ' ಕಾದ೦ಬರಿ, ಬರಹಗಾರ, ಪತ್ರಿಕಾ ಛಾಯಾಗ್ರಾಹಕ ಅಹಮ್ಮದ್ ಅನ್ವರ್ ಅವರ `ಬೇವು ಬೆಲ್ಲ' ಹನಿಗವನ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರ೦ಭ ಡಿ.27ರ೦ದು ಬೆ೦ಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಸಭಾ ಭವನದಲ್ಲಿ ನಡೆಯಲಿದೆ.


Share: