ಕಾರವಾರ: ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಆಯೋಜನೆಯಲ್ಲಿ ನಗರದ ಮಾಲಾದೇವಿ ಮೈದಾನದಲ್ಲಿ 'ಮೀಡಿಯಾ ಕಪ್-2022' ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ಗೆ ನಗರಸಭಾ ಅಧ್ಯಕ್ಷ ಡಾ. ನಿತೀನ್ ಪಿಕಳೆ ಹಾಗೂ ನೇತ್ರಾಣಿ ಅಡ್ವೇಂಚರ್ ಮಾಲೀಕ ಗಣೇಶ ಹರಿಕಂತ್ರ ಮಂಗಳವಾರ ಚಾಲನೆ ನೀಡಿದರು.
ಪಂದ್ಯಾವಳಿ ಉದ್ಘಾಟಿಸಿದ ನಗರಸಭಾ ಅಧ್ಯಕ್ಷ ನಿತೀನ ಪಿಕಳೆ ಮಾತನಾಡಿ ಪ್ರತಿನಿತ್ಯ ಪತ್ರಿಕೋದ್ಯಮದ ಕೆಲಸದ ನಿರ್ವಹಣೆಯಲ್ಲಿ ನಿರತರಾಗಿರುತ್ತಿದ್ದ ಪತ್ರಕರ್ತರು ಇಂಥಹ ಕ್ರೀಡಾ ಚಟುವಟಿಕೆಗಳಿಂದ ಕೊಂಚ ವಿರಮಿಸಲು ಸಾಧ್ಯವಾಗುತ್ತದೆ. ಕ್ರೀಡೆಯೂ ಸಹ ಮನುಷ್ಯನ ಒಂದು ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಕ್ರೀಡಾಸ್ಪೂರ್ತಿಯಿಂದ ಆಡಿ ನಿಮ್ಮಲ್ಲಿಯ ಪ್ರತಿಭೆಯನ್ನೂ ಸಹ ಹೊರಹಾಕಿ, ಜೊತೆಗೆ ನೀವು ಹೇಗೆ ಬೇರೆಯವರ ಪ್ರತಿಭೆಯನ್ನೂ ತೋರಿಸಿ, ಕೆಲವರ ನ್ಯೂನತೆಗಳನ್ನು ಬರವಣಿಗೆಯ ಮೂಲಕ ಸುಧಾರಣೆ ತರುತ್ತಿರೋ ಹಾಗೆ ನೀವು ಕೂಡ ಈ ಕ್ರಿಕೇಟ್ ಆಟದಲ್ಲಿ ಯಶಸ್ವಿಯಾಗಿ ಹೊರ ಹೊಮ್ಮುವಂತಾಗಲಿ ಎಂದು ಆಶಿಸಿದರು.
ನೇತ್ರಾಣಿ ಅಡ್ವೇಂಚರ್ ಮಾಲಿಕ ಗಣೇಶ ಹರಿಕಂತ್ರ ಪಂದ್ಯಾವಳಿಗೆ ಶುಭಕೋರಿದರು. ಪಂದ್ಯಾವಳಿಯ ಉದ್ಘಾಟನೆಯನ್ನ ಗಣ್ಯ ವ್ಯಕ್ತಿಗಳ ಬ್ಯಾಟಿಂಗ್, ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು.
ಬಳಿಕ ನಡೆದ ಮೊದಲ ಪಂದ್ಯದಲ್ಲಿ ಕಾರವಾರ "ಬಿ" ಹಾಗೂ ಕುಮಟಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಮಟಾ ತಂಡ ಜಯಗಳಿಸಿ ಮುಂದಿನ ಪಂದ್ಯಕ್ಕೆ ಅರ್ಹತೆ ಗಳಿಸಿತು. ಇನ್ನು ಕಾರವಾರ "ಎ" ಹಾಗೂ ಅಂಕೋಲಾ ತಂಡಗಳ ನಡುವೆ ಮೊದಲ ಹಣಾಹಣಿ ನಡೆಯಬೇಕಿತ್ತಾದರೂ ಅಂಕೋಲಾ ತಂಡ ಗೈರಾಗಿದ್ದರಿಂದ ಕಾರವಾರ "ಎ" ಜಯ ಎಂದು ಘೋಷಣೆ ಮಾಡಲಾಯಿತು.
ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ ಬಿ ಹರಿಕಾಂತ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯದರ್ಶಿ ದೀಪಕ ಶೆಟ್ಟಿ, ಖಜಾಂಚಿ ಸುಭಾಷ್ ದೂಪದಹೊಂಡ, ಹಿರಿಯ ಪತ್ರಕರ್ತರಾದ ವಸಂತ ಭಟ್, ದೀಪಕಕುಮಾರ ಶೆಣೈ, ನಾಗರಾಜ ಹರಪನಳ್ಳಿ, ,ನಗರಸಭೆ ಮಾಜಿ ಸದಸ್ಯ ರತ್ನಾಕರ್ ನಾಯ್ಕ, ನಿರ್ಣಾಯಕರಾದ ದೀಪಕ ಬಿಣಗೇಕರ್, ಅಮಿತ ಕಾಮತ ಇದ್ದರು.
ಬುಧವಾರ ಪೈನಪ್ ಪಂದ್ಯ ನಡೆಯಲಿದ್ದು ಬಹುಮಾನ ವಿತರಣಾ ಸಮಾರಂಭವು ಸಂಜೆಗೆ ನಡೆಯಲಿದ್ದು, ಕುಮಟಾ ಶಾಸಕ ದಿನಕರ ಶೆಟ್ಟಿ ಬಹುಮಾನ ವಿತರಕರಾಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸತೀಶ್ ಸೈಲ್, ಉತ್ತರಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಉದ್ಯಮಿ ಗೋಪಾಲ ನಾಯಕ ಅಡ್ಲೂರು ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.