ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / 'ಗೋರಕ್ಷಕರಿಂದ ಅಪಹರಿಸಲ್ಪಟ್ಟ ಇಬ್ಬರ ಶವ ಪತ್ತೆ

'ಗೋರಕ್ಷಕರಿಂದ ಅಪಹರಿಸಲ್ಪಟ್ಟ ಇಬ್ಬರ ಶವ ಪತ್ತೆ

Sun, 19 Feb 2023 11:35:40  Office Staff   Vb

ಚಂಡೀಗಢ: ಇಬ್ಬರು ವ್ಯಕ್ತಿಗಳನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ 'ಗೋರಕ್ಷಕರು ಅಪಹರಿಸಿದ ಬಳಿಕ ಅವರ ಸುಟ್ಟ ಮೃತದೇಹಗಳು ಹರ್ಯಾಣದ ಭಿವಂಡಿ ಜಿಲ್ಲೆಯಲ್ಲಿ ಕಾರೊಂದರಲ್ಲಿ ಗುರುವಾರ ಪತ್ತೆಯಾಗಿದೆ.

ಭರತ್‌ಪುರ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಯಾನೆ ಜೂನ್‌ರನ್ನು ಬಜರಂಗ ದಳದ ಸದಸ್ಯರು ಅಪಹರಿಸಿದ್ದಾರೆ ಎಂಬುದಾಗಿ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ ಒಂದು ದಿನದ ಬಳಿಕ ಅವರ ಮೃತದೇಹಗಳು ಪತ್ತೆಯಾಗಿವೆ.

ರಾಜಸ್ಥಾನ ಪೊಲೀಸರು ಲೋಕೇಶ್, ರಿಂಕು ಸೈನಿ, ಶ್ರೀಕಾಂತ್ ಮತ್ತು ಮೋನು ಮನೆಸರ್ ಎಂಬ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಘಟನೆ ಖಂಡನಾರ್ಹ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲಟ್ ಹೇಳಿದ್ದಾರೆ ಹಾಗೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಹರ್ಯಾಣ ಫಿರೋಝ್ ಪುರದ ಝಿರ್ಕಾ ನಿವಾಸಿ ರಿಂಕು ಸೈನಿಯನ್ನು ಬಂಧಿಸಲಾಗಿದೆ. ಟ್ಯಾಕ್ಸಿ ಚಾಲಕನಾದ ಈತ ಗೋರಹ ದಳದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Share: