ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / '2002ರಲ್ಲಿ ಅವರಿಗೆ ಪಾಠ ಕಲಿಸಿದ್ದೇವೆ' ಅಮಿತ್ ಶಾ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಚು.ಆಯೋಗ

'2002ರಲ್ಲಿ ಅವರಿಗೆ ಪಾಠ ಕಲಿಸಿದ್ದೇವೆ' ಅಮಿತ್ ಶಾ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಚು.ಆಯೋಗ

Tue, 13 Dec 2022 00:42:12  Office Staff   Vb

ಹೊಸದಿಲ್ಲಿ: ಚುನಾವಣಾ ಆಯೋಗವು ಇತ್ತೀಚೆಗೆ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ 2002ರಲ್ಲಿ ಪಾಠ ಕಲಿಸಿದ್ದೇವೆ' ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಆಯೋಗದಲ್ಲಿನ ಮೂಲಗಳು ತಿಳಿಸಿವೆ.

ನ.25ರಂದು ರಾಲಿಯಲ್ಲಿ ಮಾತನಾಡಿದ್ದ ಶಾ, 2002ರಲ್ಲಿ ಬಿಜೆಪಿಯು ದಂಗೆಕೋರರಿಗೆ ಪಾಠವನ್ನು ಕಲಿಸಿದೆ ಎಂದು ಹೇಳಿದ್ದರು. ಶಾ ಭಾಷಣವು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ನಿವೃತ್ತ ಸರಕಾರಿ ಅಧಿಕಾರಿ ಇಎಎಸ್ ಶರ್ಮಾ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರನ್ನು ಪರಿಶೀಲಿಸಿದ್ದ ಆಯೋಗವು ಗುಜರಾತ್ ಮುಖ್ಯ  ಚುನಾವಣಾಧಿಕಾರಿಗಳಿಂದ ವರದಿಯನ್ನು ಕೋರಿತ್ತು.


Share: