ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ‌ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ ಯುವಕನನ್ನು ರಕ್ಷಿಸಿದ ಲೈಫ್ ಗಾರ್ಡ್

‌ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ ಯುವಕನನ್ನು ರಕ್ಷಿಸಿದ ಲೈಫ್ ಗಾರ್ಡ್

Sun, 15 Jan 2023 17:51:45  Office Staff   SOnews

ಭಟ್ಕಳ:  ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಕುಟುಂಬದ ಬಾಲಕನೊಬ್ಬ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗುತ್ತಿದ್ದಾಗ ಲೈಫ್ ಗಾರ್ಡ್ ಸಿಬ್ಬಂಧಿಗಳು ರಕ್ಷಣೆ ಮಾಡಿ ಸುರಕ್ಷಿತವಾಗಿ ದಡ ಸೇರಿಸಿದ ಘಟನೆ ಶನಿವಾರ ಮುರುಡೇಶ್ವರ ಸಮುದ್ರ ಕಡಲತೀರದಲ್ಲಿ ನಡೆದಿದೆ.  

ಲೈಫ್ ಗಾರ್ಡ್ ರಕ್ಷಿಸಿದ ಯುವಕನನ್ನು ಕೋಲಾರದ ಆದೇಶ್ ಅರವಿಂದ್(೧೯) ಎಂದು ಗುರುತಿಲಾಗಿದೆ.

ಲಭ್ಯ ಮಾಹಿತಿ ಪ್ರಕಾರ ಕೋಲಾರದಿಂದ ಒಂದೇ ಕುಟುಂಬದ 7 ಮಂದಿ ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ. ಇದೇ ವೇಳೆ ಯುವಕನೊಬ್ಬ ಈಜಲು ಬಯಸಿ ಸಮುದ್ರದಲ್ಲಿ ಇಳಿದಿದ್ದಾನೆ.

ಸಮುದ್ರದ ತೆರೆಗಳ ಸೆಳೆತಕ್ಕೆ ಸಿಲುಕಿ ಸಮುದ್ರಪಾಲಾಗುತ್ತಿದ್ದ ಯುವಕನನ್ನು ಲೈಫ್ ಗಾರ್ಡ್(ಜೀವರಕ್ಷಕ) ಸಿಬ್ಬಂಧಿಗಳಾದ  ವಿಘ್ನೇಶ್, ಶೇಖರ್, ಪ್ರವೀಣ್ ಮತ್ತು ಹನುಮಂತ್  ಎಂಬುವವರೇ ಯುವಕನನ್ನು ರಕ್ಷಿಸಿದ ಜೀವರಕ್ಷಕರಾಗಿದ್ದಾರೆ.


Share: