ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನೆಮಡಿ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ

ಹೊನ್ನೆಮಡಿ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ

Mon, 05 Dec 2022 02:41:30  Office Staff   S.O. News Service

ಭಟ್ಕಳ:ತಾಲೂಕಿನ ಹೊನ್ನೆಮಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು. 
ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲಾ ವ್ಯಾಪ್ತಿಯಲ್ಲಿ ಬರುವ ಎರಡು ವಿಶೇಷ ಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಅವರೊಂದಿಗೆ ಬೆರೆತು ಅವರಿಗೆ ಬಿಸ್ಕೀಟ್, ಚಾಕಲೇಟ್, ಹಣ್ಣುಗಳನ್ನು ನೀಡಿ ಅವರ ಜೊತೆಗೆ ತಾವಿದ್ದೇವೆ ಎನ್ನುವುದನ್ನು ಸಾರಿದರು. 
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸಾರಿಂಗ ಮುಕ್ರಿ, ಸಹ ಶಿಕ್ಷಕ ರಾಘವೇಂದ್ರ ಮಡಿವಾಳ, ಅರುಣ್ ಮೇಸ್ತ, ಸುಮಲತಾ ನಾಯ್ಕ, ಸತ್ಯವತಿ ಶೆಟ್ಟಿ, ಪಲ್ಲವಿ ನಾಯ್ಕ, ಪವಿತ್ರಾ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

 


Share: