ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೈಕೋರ್ಟ್ ಮಧ್ಯಸ್ಥಿಕೆಯಲ್ಲಿ ತನಿಖೆಗೆ ಸಿಪಿಎಂ ಒತ್ತಾಯ

ಹೈಕೋರ್ಟ್ ಮಧ್ಯಸ್ಥಿಕೆಯಲ್ಲಿ ತನಿಖೆಗೆ ಸಿಪಿಎಂ ಒತ್ತಾಯ

Sun, 04 Dec 2022 20:49:29  Office Staff   Vb

ಬೆಂಗಳೂರು: ಬಿಬಿಎಂಪೀ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗ ಳಲ್ಲಿ ಮತದಾರರ ಪಟ್ಟಿಯ ಪರಿಷ್ಠ ರಣೆ ಹೆಸರಿನಲ್ಲಿ ಸುಮಾರು 6.69 ಲಕ್ಷ ನೈಜ ಮತದಾರರನ್ನು ಪಟ್ಟಿ ಯಿಂದ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯ ಮೂರ್ತಿ ಮಧ್ಯಸ್ಥಿಕೆ ವಹಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

ಚುನಾವಣೆಯಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ 30 ಸಾವಿರದಿಂದ 60 ಸಾವಿರದಷ್ಟು ಮತದಾರರನ್ನು ಪಟ್ಟಿಯಿಂದ ರದ್ದುಗೊಳಿಸುವ ನೀಚಮಟ್ಟಕ್ಕೆ ಇಳಿದಿದ್ದು, 'ಚಿಲುಮೆ' ಎಂಬ ಸಂಸ್ಥೆಯ ಮೂಲಕ ಕಂದಾಯ ಅಧಿಕಾರಿಗಳನ್ನು ಬಳಸಿ ಕೊಂಡು ಅಕ್ರಮವಾಗಿ ಇಲಾಖೆಯ ಪಾಸ್‌ವರ್ಡ್‌ಗಳನ್ನು ಪಡೆದು ಬಿಜೆಪಿ ಕಚೇರಿಗಳಲ್ಲೇ ಮತಪಟ್ಟಿ ಪರಿಷ್ಕರಣೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.


Share: