ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 183 ಪ್ರಕರಣಗಳನ್ನು 5,77,12,376 ರೂ. ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು .
ಹಿರಿಯ ನ್ಯಾಯಮೂರ್ತಿಗಳಾದ ಎಸ್ .ಜಿ.ಪಂಡಿತ್ ಅವರ ಮಾರ್ಗದರ್ಶನದಲ್ಲಿ , ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ , ರವಿ ವಿ . ಹೊಸಮನಿ ಮತ್ತು ಅನಂತ ರಾಮನಾಥ ಹೆಗಡೆ ಹಾಗೂ ಲೋಕ ಅದಾಲತ್ನ ಸದಸ್ಯರುಗಳಾದ ಎಲ್ . ಟಿ . ಮಂಟಗಣಿ , ಎಸ್ . ಎಸ್ . ಬಾವಾಖಾನ , ಎಮ್ . ಟಿ . ಬಂಗಿ ಮತ್ತು ಎಮ್ . ಸಿ . ಹುಕ್ಕೇರಿ ಅವರನ್ನೊಳಗೊಂಡ 4 ಪೀಠಗಳಲ್ಲಿ ವ್ಯಾಜ್ಯಗಳ ರಾಜಿ ಸಂಧಾನ ನಡೆದವು.
ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಹಾಗೂ ವಕೀಲರಾದ ಎಮ್ . ಸಿ . ಹುಕ್ಕೇರಿ ಅವರ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ - ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿದ್ದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ನ ಹೆಗ್ಗಳಿಕೆಯಾಗಿದೆ
ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.