ಚಿಕ್ಕಮಗಳೂರು, ಡಿ.17 : ಇಂದು ರಾಜ್ಯ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಜಿಲ್ಲೆಯ ಒಂದು ಸ್ಥಾನಕ್ಕಾಗಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಸ್. ಬೋಜೇಗೌಡರ ವಿರುದ್ಧ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎ.ವಿ. ಗಾಯಿತ್ರಿ ಶಾಂತೇಗೌಡ ಗೆಲುವಿನ ನೊಗ ಹೆಣೆಯಲು ಪೂರ್ವ ತಯಾರಿ ನಡೆಸಿದ್ದಾರೆ.
ಹೇಳಿಕೇಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯೇತರ ಜನ ಪ್ರತಿನಿಧಿಗಳು ಬಹುತೇಕ ಸಂಖ್ಯೆಯಲ್ಲಿರುವುದು ಕಾಂಗ್ರೆಸ್ ಅಭ್ಯರ್ಥಿಯ ವಿಶ್ವಾಸಕ್ಕೆ ಮೂಲ ಕಾರಣವಾಗಿದೆ. ಅದಲ್ಲದೆ ಬಿಜೆಪಿ ಶಾಸಕರಿಂದ ಮತ್ತು ಮುಖಂಡರಿಂದ ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದ ರೀತಿಯಲ್ಲಿದ್ದು, ಅಭಿವೃದ್ಧಿಪರ ಚಟುವಟಿಕೆಗಳು ತೀವ್ರ ಕುಂಠಿತವಾಗಿದ್ದು, ಅಲ್ಲದೆ ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟಕುಗೊಳಿಸುವ ರಾಜ್ಯ ಸರಕಾರದ ಧೋರಣೆಯನ್ನು ಅರಿತಿರುವವರು ಆ ಪಕ್ಷದ ಸೋಲಿಗೆ ಪ್ರಮುಖ ಪಾತ್ರ ವಹಿಸಲಿರುವುದು ಜಿಲೆಯಲ್ಲಿ ನಡೆಯುತಿತಿರುವ ಕೆಲ ದಿನಗಳ ರಾಜಕೀಯ ವಿದ್ಯಾಮಾನಗಳಿಂದ ಬಹಿರಂಗವಾಗಿದೆ.
ಹಾಗೆ ನೋಡಿದರೆ, ಕಾಫಿ ಕಣಿವೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಹೊಸ ಆಯಾಮ ದೊರೆಯಲಿರುವುದು ಸ್ಪಷ್ಟವಾಗಿದೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಬಿಜೆಪಿಯ ಬಲ ಕುಂದಿದೆ ಎಂದು ಅರ್ಥೈಸುವುದು ಸರಿಯಲ್ಲ. ಅಂದು ಕೊಂಡಂತೆ ನಡೆದರೆ ಮಾತ್ರ ಬಿಜೆಪಿಯೇತರಿಗೆ ಗೆಲುವಿನ ಭಾಗ್ಯ ದೊರೆಯಲಿದೆ. ಹಾಗೂ ಕಾಂಗ್ರೆಸ್, ಜೆಡಿಎಸ್ ಜೊತೆಗೆ ಇನ್ನಿತರ ಜತ್ಯಾತೀತ ನಿಲುವುಗಳುಳ್ಳ ಸಿಪಿಐ ಮತು ಬಿಎಸ್ಪಿ ಪಕ್ಷಗಳು ಒಗ್ಗಟ್ಟಿನ ಮಂತ್ರಕ್ಕೆ ಅಂಟಿಕೊಂಡಿರುವುದರಿಂದ ಅಭಿವೃದ್ಧಿಪರ ಚಿಂತಕರಲ್ಲಿ ವಿಶ್ವಾಸ ಮೂಡಿಸಿದೆ.
ಅದಾಗ್ಯೂ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವೆನಿಸಲಿದೆ. ಕಾಂಗ್ರೆಸ್ನ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಕುರುಬ ಜನಾಂಗದವರಾಗಿರುವುದು ಅಹಿಂದ ಸೇರಿದಂತೆ ಕಡಿಮೆ ಸಂಖ್ಯೆಯಲ್ಲಿರುವ ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗಗಳ, ದಲಿತ ಸಮುದಾಯಗಳ ಬಹುತೇಕ ಮತಗಳು ಅವರಿಗೆ ಲಭ್ಯವಾಗಲಿದೆ. ಆದರೂ ಒಕ್ಕಲಿಗರ ಮತವನ್ನು ಯಾವ ಮಟ್ಟದಲ್ಲಿ ಪಡೆಯಲಿದ್ದಾರೆ ಎಂಬುದರ ಮೇಲೆ ಅವರ ಗೆಲುವು ನಿರ್ಧಾರವಾಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತಿತಿದೆ.
ಬ್ರಾಹ್ಮಣ ಮತುತಿ ಲಿಂಗಾಯಿತ ಮತಗಳ ಜೊತೆಗೆ ಒಕ್ಕಲಿಗ ಮತಗಳ ಮೇಲೆ ಬಿಜೆಪಿ ಅಭ್ಯರ್ಥಿ ಎಂ.ಎಸ್. ಬೋಜೇಗೌಡರು ನಂಬಿಕೆ ಇಟ್ಟುಕೊಂಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪರ ಬಲವಿಲ್ಲದ ಜೆಡಿಎಸ್ ಮತಗಳು ತಮಗೆ ದೊರೆಯಲಿದೆ ಎಂಬುದನ್ನು ಅವರು ಮನನ ಮಾಡಿಕೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ವಿಶೇಷ ಪ್ರಾಬಲ್ಯ ಗಳಿಸಿಕೊಂಡಿದೆ. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ನ ಭದ್ರ ಕ್ಷೇತ್ರದೊಳಗೆ ಲಗ್ಗೆ ಇಟ್ಟ ಬಿಜೆಪಿಯು ಯಶಸ್ಸು ಸಾಽಸಿದೆ. ಅದು ನಾಲ್ಕು ವಿಧಾನಸಭಾ ಕ್ಷೇತ್ರಗಳ ಸಹಿತ ಲೋಕಸಭಾ ಕ್ಷೇತ್ರವನ್ನು ಬಾಚಿಕೊಂಡಿದೆ. ಆದರೆ ಈವರೆಗೂ ಬಹುತೇಕ ತಾಲ್ಲೂಕು ಪಂಚಾಯಿತಿ ಒಳಗೊಂಡಂತೆ ಜಿಲ್ಲಾ ಪಂಚಾಯಿತಿಯ ಮೇಲೆ ಕಣ್ಣು ನೆಟ್ಟಿತಾತಿದರೂ ಅದರಲ್ಲಿ ಯಶಸ್ಸು ಪಡೆಯಲು ಈವರೆಗೂ ಸಾಧ್ಯವಾಗಿಲ್ಲ. ಹಿಂದೆ ರಾಜದಾದ್ಯಂತ ಅಪರೇಷನ್ ಕಮಲದ ಮೂಲಕ ಜನಪ್ರತಿನಿಽಗಳನ್ನು ಸೆಳೆದುಕೊಂಡಿದ್ದ ಬಿಜೆಪಿಗೆ ಜಿಲ್ಲೆಯಲ್ಲಿ ಅದು ಸಾಧ್ಯವಾಗಿಲ್ಲ. ಆದರೂ ಜಿಲ್ಲೆಯ ಮೇಲ್ಮನೆ ಸ್ಥಾನವನ್ನು ಶತಾಯಗತಾಯ ತೆಕ್ಕೆಗೆ ಹಾಕಿಕೊಳ್ಳಲು ಅದು ರಣತಂತ್ರ ಹೆಣೆದುಕೊಂಡಿರುವುದು ರಹಸ್ಯವಾಗಿ ಉಳಿದಿಲ್ಲ.
ಈ ಕ್ಷೇತ್ರದಲ್ಲಿ ಒಟ್ಟು ೨೬೯೨ ಮತದಾರರಿದ್ದಾರೆ. ಅವರಲ್ಲಿ ೧೪೧೦ ಪುರುಷರು, ೧೨೮೨ ಮಹಿಳೆಯರು ಸೇರಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೫೯೩, ಮೂಡಿಗೆರೆಯಲ್ಲಿ ೩೪೮, ಶೃಂಗೇರಿಯಲ್ಲಿ ೧೧೧, ನರಸಿಂಹರಾಜಪುರದಲ್ಲಿ ೧೭೨, ಕೊಪ್ಪದಲ್ಲಿ ೨೪೦, ತರೀಕೆರೆಯಲ್ಲಿ ೫೩೬ ಮತ್ತು ಕಡೂರು ತಾಲ್ಲೂಕಿನಲ್ಲಿ ೬೯೨ ಮತದಾರರಿದ್ದು ಅಭ್ಯರ್ಥಿಯ ಆಯ್ಕೆಗಾಗಿ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ೨೦೦೩ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ನ ಡಿ.ಎಂ. ಪುಟ್ಟೇಗೌಡ ಅತ್ಯಾಧಿಕ ಮತಗಳ ಅಂತರದಿಂದ ಜನತಾದಳದ ಅಭ್ಯರ್ಥಿಯ ವಿರುದ್ಧ ಗೆಲುವು ದಾಖಲಿಸಿದ್ದರು. ಬಿಜೆಪಿ ಅಭ್ಯರ್ಥಿಯು ಕನಿಷ್ಠ ಮತ ಪಡೆದು ಸೋಲನುಭವಿಸಿದ್ದರು.
ಸಧ್ಯಕ್ಕೆ ಮೇಲ್ಮನೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಂತದಲ್ಲಿ ಹಣ, ಹೆಂಡದ ಜೊತೆಗೆ ಬಾಡೂಟ ಸೀರೆಗಳು ಎಲ್ಲೆಂದರಲ್ಲಿ ಹರಿದಾಡುತಿತಿದ್ದು ಉಡುಗೊರೆ ರೂಪದಲ್ಲಿ ಹಲವರಿಗೆ ಸಂದಾಯವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ರೀತಿಯ ಚಟುವಟಿಕೆಗಳಿಂದ ವಿಧಾನಪರಿಷತ್ ಚುನಾವಣೆಯು ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇಂದು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಲಾಡ್ಯವಾಗಿ ಬೆಳೆದಿರುವ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಜೆಡಿಎಸ್ ಮತುತಿ ಕಾಂಗ್ರೆಸ್ ಕಣದಲ್ಲಿ ಒಟ್ಟಾಗಿ ಟೊಂಕ ಕಟ್ಟಿ ನಿಂತಿದ್ದು ಸಿಪಿಐ ಮತುತಿ ಬಿಎಸ್ಪಿ ಬೆಂಬಲ ಸೂಚಿಸಿದೆ. ಆದರೂ ಇಲ್ಲಿ ಪ್ರಬಲ ಪೈಪೋಟಿ ನಡೆಯಲಿರುವುದು ಮಾತ್ರ ಶತಸಿದ್ಧ.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಎಸ್ಎಸ್ನಿಂದ ಪ್ರತಿಭಟನೆ
ತಮ್ಮ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಕೊಡುವಂತೆ ಆಗ್ರಹಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತುತಿ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಹಳೇ ತಾಲ್ಲೂಕು ಕಛೇರಿ ಬಳಿಯಿಂದ ಹೊರಟ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಎಂ.ಜಿ. ರಸೆತಿಯಲ್ಲಿ ಹಾದು ಸರ್ಕಾರದ ದಲಿತ ವಿರೋಧಿ, ಜನ ವಿರೋಧಿನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುತಾತಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸಮಾವೇಶಗೊಂಡರು.
ಜಿಲ್ಲೆಯಲ್ಲಿ ಮೇಲ್ಜಾತಿ ಜನರಿಂದ ದಲಿತ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತಿತಿದೆ, ಹಿಂದೆ ದಲಿತರ ಭೂಮಿಯನ್ನು ಬಲವಂತದಿಂದ ಪಡೆದ ಮೇಲ್ಜಾತಿಯವರಿಂದ ವಾಪಾಸುಕೊಡಿಸಬೇಕು. ಆಶ್ರಯ, ಇಂದಿರಾ ಆವಾಜ್, ಅಂಬೇಡ್ಕರ್ ಯೋಜನೆಗಳಲ್ಲಿ ಮನೆ ನೀಡುವಲ್ಲಿ ತಾರತಮ್ಯ ಮಾಡದೆ ದಲಿತರಿಗೆ ಮನೆಗಳನ್ನು ವಿತರಿಸಬೇಕು. ವಿವಿದೆಡೆ ಬಗರ್ ಹುಕುಂ ಸಾಗುವಳಿ ಮಾಡಿಕೊಂಡಿರುವ ದಲಿತರಿಗೆ ಅವುಗಳನ್ನು ಸಕ್ರಮಗೊಳಿಸಿ ಕೊಡಬೇಕು. ನಗರಸಭೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅರ್ಹರಿಗೆ ಅಗತ್ಯವಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ಸ್ಥಳೀಯ ಶಾಸಕ ಸಿ.ಟಿ. ರವಿಯ ಮನೆಯ ಮುಂದೆ ಪ್ರತಿಭಟನೆ ನಡೆಸಲು ಆರಂಭದಲ್ಲಿ ನಿರ್ಧರಿಸಲಾಗಿದ್ದರು ಪೋಲಿಸ್ ಇಲಾಖೆ ಅನುಮತಿ ನಿರಾಕರಿಸಿದ್ದರಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಟಿ. ರವಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.