ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹಾಸನ: ಜಾತ್ರೆಯಲ್ಲಿ ಘರ್ಷಣೆ - ಹತ್ತು ಜನರಿಗೆ ಗಾಯ

ಹಾಸನ: ಜಾತ್ರೆಯಲ್ಲಿ ಘರ್ಷಣೆ - ಹತ್ತು ಜನರಿಗೆ ಗಾಯ

Wed, 24 Feb 2010 02:45:00  Office Staff   S.O. News Service

ಹಾಸನ, ಫೆ.೨೩- ಆಲೂರು ತಾಲ್ಲೂಕಿನ ದೊಡ್ಡಗಣಗಾಲು ಸಮೀಪದ ಸೋಂಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ನಂಜದೇವರ ಜಾತ್ರೆ ಸಂದರ್ಭ ಘರ್ಷಣೆ ಸಂಭವಿಸಿ ೧೦ ಮಂದಿ ಗಾಯಗೊಂಡಿದ್ದಾರೆ.

 

ಜೂಜಾಡುತ್ತಿದ್ದ ವೇಳೆ ಚಾಕು ಇರಿತಕ್ಕೆ ಮಂಜೇಗೌಡ ಎಂಬಾತ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಂತರ ಉಂಟಾದ ಪರಸ್ಪರ ಕೂಗಾಟ, ಗದ್ದಲ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಈ ಸಂದರ್ಭ ಮಂಜುನಾಥ್, ಕೃಷ್ಣೇಗೌಡ ಸೇರಿ ೮ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಾಕು ಇರಿದ ವಿರಾಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಂಪುರ ಗ್ರಾಮದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಇದೀಗ ಪರಿಸ್ಥಿತಿ ಶಾಂತವಾಗಿದೆ.


Share: