ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಳಿಯಾಳದಲ್ಲಿ13 ದಿನಗಳ ಕೃಷಿ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ

ಹಳಿಯಾಳದಲ್ಲಿ13 ದಿನಗಳ ಕೃಷಿ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ

Mon, 26 Sep 2022 20:26:35  Office Staff   S O News

ಕಾರವಾರ : ಜಿಲ್ಲೆಯ ಹಳಿಯಾಳದ  ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆ ವತಿಯಿಂದ 13 ದಿನಗಳ ಕೃಷಿ ಉದ್ಯಮಿ ತರಬೇತಿಯನ್ನು   ಹಮ್ಮಿಕೊಳ್ಳಲಾಗಿದೆ.

ಆಸಕ್ತ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ಅಕ್ಟೋಬರ್ 3 ರೊಳಗಾಗಿ ತಮ್ಮ ಹೆಸರು, ವಿಳಾಸಗಳನ್ನು ನೊಂದಾಯಿಸಿಕೊಳ್ಳಬೇಕು. ತರಬೇತಿಯೂ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತವೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಟೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಕುರಿತು  ಉಚಿತವಾಗಿ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉತ್ತರ ಕನ್ನಡ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ,  ವಿಳಾಸಕ್ಕೆ ಅಥವಾ  ಸಂಸ್ಥೆಯ ದೂರವಾಣಿ ಸಂಖ್ಯೆ 9482188780, 9483485489, 08284-295307, 220807, 9742438790 ಗೆ ಸಂಪರ್ಕಿಸಿ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


Share: