ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹರ್ಯಾಣ: ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಹಿಳಾ ಅಥ್ಲೆಟಿಕ್ಸ್ ಕೋಚ್ ಅಮಾನತು

ಹರ್ಯಾಣ: ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಹಿಳಾ ಅಥ್ಲೆಟಿಕ್ಸ್ ಕೋಚ್ ಅಮಾನತು

Thu, 17 Aug 2023 13:04:04  Office Staff   Vb

ಚಂಡಿಗಡ: ಹರ್ಯಾಣ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳಾ ಅಥ್ಲೆಟಿಕ್ಸ್‌ ಕೋಚ್ ಅನ್ನು ಆಗಸ್ಟ್ 11ರಂದು ಅಮಾನತು ಮಾಡಲಾಗಿದೆ.

ಲೈಂಗಿಕ ಕಿರುಕುಳ, ಅಕ್ರಮ ಬಂಧನ, ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಬಿಜೆಪಿ ನಾಯಕ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ಕಪ್ತಾನ ಸಂದೀಪ್ ಸಿಂಗ್ ವಿರುದ್ಧ ಜನವರಿ 31ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಥಮ ಮಾಹಿತಿ ವರದಿ ದಾಖಲಿಸಿದ ಸಂದರ್ಭ ಸಂದೀಪ್ ಸಿಂಗ್ ಕ್ರೀಡಾ ಸಚಿವರಾಗಿದ್ದರು. ಪ್ರಕರಣ ದಾಖಲಾದ ಬಳಿಕ ಸಂದೀಪ್ ಸಿಂಗ್ ತನ್ನ ಖಾತೆಯನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಹಸ್ತಾಂತರಿಸಿದ್ದರು.

ನಾನು ಕ್ರಿಡಾಳು. ನಾನು ಅಥ್ಲೆಟಿಕ್ ಟ್ರ್ಯಾಕ್ ಗೆ ಪ್ರವೇಶಿಸದಂತೆ ನಾಲ್ಕು ತಿಂಗಳು ನಿರ್ಬಂಧ ವಿಧಿಸಲಾಗಿದೆ. ಓರ್ವ ಕ್ರೀಡಾಳುವಿಗೆ ಇದಕ್ಕಿಂತ ಹೆಚ್ಚಿನ ನೋವಿನ ವಿಚಾರ ಯಾವುದಿದೆ. ನನ್ನ ಮೂಲಭೂತ ಹಕ್ಕುಗಳನ್ನು ಕ್ರೀಡಾ ಇಲಾಖೆ ಹಾಗೂ ಸರಕಾರ ಕಸಿದುಕೊಂ ಡಿದೆ. ಆದರೆ, ನಾನು ಈ ಯುದ್ಧದಲ್ಲಿ ಏಕಾಂಗಿಯಾಗಿ ಹೋರಾಡಲು ಸಮರ್ಥಳಾಗಿದ್ದೇನೆ. ಅಂತ್ಯದಲ್ಲಿ ಸತ್ಯ ಬಹಿರಂಗಗೊಳ್ಳಲಿದೆ.
ಮಹಿಳಾ ಅಥ್ಲೆಟಿಕ್ಸ್ ಕೋಚ್

ಚಂಡಿಗಡದಲ್ಲಿರುವ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವಾಗಿರುವ ಸಂದೀಪ್ ಸಿಂಗ್‌ನ ಅಧಿಕೃತ ನಿವಾಸಕ್ಕೆ ಕಳೆದ ವರ್ಷ ಫೆಬ್ರವರಿ ಹಾಗೂ ನವೆಂಬರ್ ನಡುವೆ ಭೇಟಿ ನೀಡಿದ್ದ ಸಂದರ್ಭ ಸಂದೀಪ್ ಸಿಂಗ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದೂ ಮಹಿಳಾ ಅಥ್ಲೆಟಿಕ್ಸ್ ಕೋಚ್ ದೂರಿನಲ್ಲಿ ಆರೋಪಿಸಿದ್ದಾರೆ.

ಹರ್ಯಾಣದ ಕ್ರೀಡಾ ಇಲಾಖೆಯ ನಿರ್ದೇಶಕ ಯತೇಂದ್ರ ಸಿಂಗ್ ಕಳೆದ ವಾರ ನೀಡಿರುವ ಆದೇಶದಲ್ಲಿ ಮಹಿಳಾ ಆತ್ಲೇಟೆಕ್ಸ್ ಕೋಚ್ ಅನ್ನು ಯಾಕೆ ಅಮಾನತು ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. “ದೂರನ್ನು ಹಿಂಪಡೆಯಲು ಒಪ್ಪದೆ ಇರುವುದಕ್ಕೆ ತನ್ನನ್ನು ಅಮಾನತುಗೊಳಿಸಲಾಗಿದೆ” ಎಂದು ಮಹಿಳಾ ಅಥ್ಲೆಟಿಕ್ಸ್ ಕೋಚ್ ತಿಳಿಸಿದ್ದಾರೆ. 'ರಾಜಿ ಮಾಡಿಕೊಳ್ಳಲು ನನಗೆ ಒತ್ತಡ ಹೇರಲಾಗುತ್ತಿದೆ. ಅಮಾನತು ಮಾಡಿರುವುದಕ್ಕೆ ನನಗೆ ಕಾರಣಗಳನ್ನು ತಿಳಿಸಿಲ್ಲ. ಅವರು ಯಾಕೆ ಈ ಕ್ರಮ ಕೈಗೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಇದು ನನ್ನ ಮೇಲೆ ಒತ್ತಡ ಹೇರುವ ಸರಕಾರದ ಇನ್ನೊಂದು ದಾರಿ. ಆದರೆ, ನಾನು ಇದಕ್ಕೆ ತಲೆ ಬಾಗಲಾರೆ' ಎಂದು ಮಹಿಳಾ ಅಥ್ಲೆಟಿಕ್ಸ್ ಕೋಚ್ ಹೇಳಿದ್ದಾರೆ.


Share: