ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಚಿವ ಝಮೀರ್ ಅಹ್ಮದ್

ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಚಿವ ಝಮೀರ್ ಅಹ್ಮದ್

Sat, 10 Jun 2023 23:15:42  Office Staff   Vb

ಬೆಂಗಳೂರು: ರಾಜ್ಯ ಹಜ್ ಸಮಿತಿ ವತಿಯಿಂದ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಿಗಳಿಗೆ ಶುಕ್ರವಾರ ನಮಾಝ್ ನಂತರ ಹಜ್ ಭವನದಲ್ಲಿ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಸ್ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಬೀಳ್ಕೊಟ್ಟರು.

ಪ್ರತೀ ವರ್ಷದಂತೆ ಈ ಬಾರಿಯೂ ಹಜ್ ಭವನದಿಂದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಜ್ ಯಾತ್ರಿಗಳನ್ನು ಕರೆದು ಕೊಂಡು ಹೋಗಲು ಉಚಿತ ಬಸ್‌ ಸೌಲಭ್ಯ ಹಾಗೂ ಯಾತ್ರಿಗಳನ್ನು ಬೀಳ್ಕೊಡಲು ಆಗಮಿಸುವಂತಹ ಅವರ ಸಂಬಂಧಿಕರಿಗೆ ವೈಯಕ್ತಿಕವಾಗಿ ಊಟದ ವ್ಯವಸ್ಥೆಯನ್ನು (ಪ್ರತಿ ನಿತ್ಯ ಸುಮಾರು 35 ಸಾವಿರ ಮಂದಿಗೆ) ಮಾಡುತ್ತಿರುವ ಝಮೀರ್ ಅಹ್ಮದ್ ಅವರ ಸೇವೆಗೆ ಯಾತ್ರಿಗಳು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯನಗರ ಸಾಮ್ರಾಜ್ಯದ ಪರಂಪರೆಯ ಇತಿಹಾಸ ಹೊಂದಿರುವ ವಿಜಯ ನಗರ ಜಿಲ್ಲೆಯ ಉಸ್ತುವಾರಿ ನನಗೆ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಂದನೆಗಳು. ನೂತನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಮಸ್ತ ಜಿಲ್ಲೆಯ ಜನತೆ, ಜನ ಪ್ರತಿನಿಧಿ, ಸಂಘ ಸಂಸ್ಥೆಗಳನ್ನು ವಿಶಾಸಕ್ಕೆ ತೆಗೆದುಕೊಂಡು ಸಮನ್ವಯ ಸಹಕಾರದೊಂದಿಗೆ ಜಿಲ್ಲೆಗೆ ಹೊಸ ಸ್ಪರ್ಶ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ಝಮೀರ್ ಅಹ್ಮದ್ ಖಾನ್ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ

ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ಮೌಲಾನ ಮೈನುಲ್ ಆಬಿದೀನ್, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫುದ್ದೀನ್ ಕಚೇರಿವಾಲೆ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಸರ್ದಾರ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ, ಹಜ್ರತ್ ಹಮೀದ್ ಶಾ ಹಾಗೂ ಹಜ್ರತ್ ಮುಹೀಬ್ ಶಾ ದರ್ಗಾ ಸಮಿತಿಯ ಆಡಳಿತಾಧಿಕಾರಿ ಜಿ.ಎ.ಬಾವ, ಇನ್ನಿತರರು ಉಪಸ್ಥಿತರಿದ್ದರು.


Share: