ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಚ್ ಯಾತ್ರೆಗೆ ಹೊರಟ ಜಿಲ್ಲೆಯ 151 ಜನರಿಗೆ ಭಟ್ಕಳದಲ್ಲಿ ಲಸಿಕೆ ವಿತರಣೆ

ಹಚ್ ಯಾತ್ರೆಗೆ ಹೊರಟ ಜಿಲ್ಲೆಯ 151 ಜನರಿಗೆ ಭಟ್ಕಳದಲ್ಲಿ ಲಸಿಕೆ ವಿತರಣೆ

Fri, 26 May 2023 06:36:19  Office Staff   SO News

ಭಟ್ಕಳ: ರಾಜ್ಯ ಹಜ್‌ ಕಮಿಟ ನೆರವಿನೊಂದಿಗೆ ಹಜ್‌ ಯಾತ್ರೆಗೆ ಹೊರಟ ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ 151 ಜನರಿಗೆ ಇಲ್ಲಿನ ಮಜ್ಜಿಸೇ ಇಸ್ಲಾ ವ ತಂಝೀಮ್ ಕಚೇರಿಯ ಸಭಾಂಗಣದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ಖಾಜಾ ಮೊಹಿದ್ದೀನ್ ಅಕ್ರಮಿ ಮದನಿ ಮತ್ತು ಮೌಲಾನಾ ಇಲಿಯಾಸ್, ಹಜ್ ಯತ್ರೆಯ ಮಹತ್ವ ಹಾಗೂ ಯಾತ್ರೆಯುದ್ಧಕ್ಕೂ ಅನುಸರಿಸಬೇಕಾದ ಎಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು. ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ಭಟ್ಕಳದಲ್ಲಿ ಮೊದಲ ಬಾರಿಗೆ ಹಜ್‌ ಯಾತ್ರಿಕರಿಗೆ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದೆ. ಇದರ ಪ್ರಯೋಜನವನ್ನು ಯಾತ್ರಿಕರು ಪಡೆಯಬೇಕು ಎಂದರು. ಭಟ್ಕಳ ಮಲ್ಲಿಯೇ ಇಸ್ಲಾ ವ ತಂಝೀಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಂಝೀಮ್' ಕಾರ್ಯದರ್ಶಿ ಅಬ್ದುರಕೀಬ್ ಎಮ್. ಜೆ. ಎಲ್ಲರನ್ನೂ ಸ್ವಾಗತಿಸಿದರು. ಹಜ್ ಕಮಿಟಿ ಸದಸ್ಯ ಯಾಹ್ಯಾ ಉಪಸ್ಥಿತರಿದ್ದರು. ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ ಇದರ ಅಧ್ಯಕ್ಷ ಅಝೀಜ್ ಉರ್ರೆಹೆಮಾನ ಕುರಾನ್ ಪಠಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಹಜ್ ಯಾತ್ರಿಕರಿಗೆ ಊಟೋಪಚಾರಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿದೇಶಿ ಹಣದ ವಿನಿಮಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕೌಂಟರ್ ಅನ್ನು ತೆರೆಯಲಾಗಿತ್ತು.


Share: