ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಭಟ್ಕಳ ತಂಜೀಮ್‌ನಿಂದ ಬೃಹತ್ ಬೈಕ್ ರ‍್ಯಾಲಿ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಭಟ್ಕಳ ತಂಜೀಮ್‌ನಿಂದ ಬೃಹತ್ ಬೈಕ್ ರ‍್ಯಾಲಿ

Tue, 16 Aug 2022 19:51:18  Office Staff   S O NEWS

ಭಟ್ಕಳ: ಭಾರತ ಸ್ವಾತಂತ್ರ್ಯ ಅಮೃತೋತ್ಸವ ಆಚರಣೆಯ ಪ್ರಯುಕ್ತ ತಾಲೂಕಿನ ಮಜ್ಜಿಸೇ ಇಸ್ಲಾ ವ ತಂಜೀಮ್ ಸಂಸ್ಥೆಯಿಂದ ಸೋಮವಾರ ಸಂಜೆ ಬೃಹತ್ ಬೈಕ್ ರ‍್ಯಾಲಿ ನಡೆಯಿತು.

ಭಟ್ಕಳ ಆನಂದಾಶ್ರಮ ಕಾನ್ವೆಂಟ್ ಮೈದಾನದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ನಂತರ ರ‍್ಯಾಲಿಯು ಸಂಶುದ್ದೀನ್ ಸರ್ಕಲ್, ಸುಲ್ತಾನ ಸ್ಟ್ರೀಟ್, ಹೂವಿನ ಮಾರುಕಟ್ಟೆ, ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮಾರಿಕಟ್ಟೆ, ಸಂಶುದ್ದೀನ್ ಸರ್ಕಲ್‌, ಮದೀನಾ ಕಾಲೋನಿ ಕ್ರಾಸ್ ಮೂಲಕ ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ಮುಕ್ತಾಯ ಕಂಡಿತು. ಈ ಸಂದರ್ಭದಲ್ಲಿ ಭಟ್ಕಳ ಮಾಜ್ಲಿಸೆ ಇಸ್ಲಾ ವ ತಂಜೀಮ್ ಅಧ್ಯಕ್ಷ ಎಸ್‌.ಎಮ್.ಫರ್ವೇಜ್, ಉಪಾಧ್ಯಕ್ಷ ಅತೀ‌ಕುರ್ ರೆಹಮಾನ್‌ ಮುನಿರಿ, ಜಾಫರ್ ಮೊಂತಿಶಂ, ಪ್ರಧಾನ ಕಾರ್ಯದರ್ಶಿ ಅಬ್ದುರಕೀಬ್ ಎಮ್. ಜೆ., ಬೈಕ್ ರ‍್ಯಾಲಿ ಸಂಚಾಲಕ ಇನಾಯಿತುಲ್ಲಾ ಶಾಬಂದ್ರಿ,ಅಬ್ದುಲ್ ರಹ್ಮಾನ್ ಜಾನ್, ಆಲ್ತಾಫ್ ಖರೂರಿ, ಸಿದ್ದಿಕ್ ಡಿ ಎಫ, ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಝೀಜ್‌ ಉರೆಹಮಾನ್, ರಾಬಿತಾ ಸೊಸೈಟಿ ಅಧ್ಯಕ್ಷ ಫಾರೂಖ್ ಮುಸ್ಬಹ್, ಪುರಸಭಾ ಉಪಾಧ್ಯಕ್ಷ ಕೈಸರ್ ಮೊತೇಶಮ್, ಸಾದೀಕ್ ಮಟ್ಟಾ, ಅಬ್ದುಸ್ಸಮಿ ಕೋಲಾ ಮೊದಲಾದವರು ಉಪಸ್ಥಿತರಿದ್ದರು.

ಅತ್ಯಂತ ಉತ್ಸಾಹ, ಸಡಗರದಿಂದ ತಿರಂಗ ಬೈಕ್‌ ಮಹಾ ರೆಯಾಲಿಯಲ್ಲಿ ಯುವಕರು ಭಾಗವಹಿಸಿದ್ದರು.

 


Share: