ಭಟ್ಕಳ; ತಾಲೂಕಿನ ಪ್ರಸಿದ್ಧ ಸೋಡಿಗದ್ದೆ ಜಾತ್ರೆಯಲ್ಲಿ ಮಂಗಳವಾರ ವಿಶೇಷವಾದ ಕೆಂಡ ಸೇವೆ ನಡೆಯಿತು. ಸಾವಿರಾರು ಭಕ್ತರು ಕೆಂಡ ಸೇವೆಗೈದು ಹರಿಕೆ ಒಪ್ಪಿಸಿದರು. ಬೆಳಗ್ಗೆ 11:30 ಗಂಟೆಗೆ ಆರಂಭವಾದ ಕೆಂಡ ಸೇವೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.ಚಿಕ್ಕ ಮಕ್ಕಳನ್ನು ಪೂಜಾರಿಗಳು ಹಾಗೂ ತಾಯಿ ಅವರು ಎತ್ತಿಕೊಂಡು ಕೆಂಡ ಹಾಯ್ದರೆ, ಹಲವಾರು ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಬೇಡಿಕೆ ತೀರಿಸಿದರು. ಜಾತ್ರೆಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ರು ಭಾಗವಹಿಸಿದ್ದು, ಬುದುವಾರ ತುಲಾಭಾರ ಸೇವೆ ನಡೆಯಲಿದೆ.
ವಿಶೇಷವಾಗಿ ಪೂಜಾರಿಯವರ ಮೇಲೆ ದೈವ ಆರಾಧನೆ ಆಗೋದು ನಿಜಕ್ಕೂ ರೋಮಾಂಚಕರಿ ಸನ್ನಿವೇಶವಾಗಿತ್ತು
ಜಾತ್ರೆ ಸಂದರ್ಭದಲ್ಲಿ ಹೂವಿನ ಪೂಜೆ, ಬಂಗಾರದ ತೊಟ್ಟಿಲು ಸಮರ್ಪಣೆ, ಬೆಳ್ಳಿ, ಬಂಗಾರದ ಕಣ್ಣು, ಬಂಗಾರದ ಆಭರಣ ಇತ್ಯಾದಿಗಳನ್ನು ಭಕ್ತಿ ಪೂರ್ವಕವಾಗಿ ದೇವಿಗೆ ಸಮರ್ಪಿಸುವ ಕಾರ್ಯ ಕೂಡಾ ಭಕ್ತರಿಂದನಡೆಯುತ್ತದೆ. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿರುವಜಾತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಕೋವಿಡ್-19 ಎರಡು ಅಲೆಯ ಬಳಿಕ
ಕೆಂಡ ಸೇವೆಯ ಹರಕೆ ಸೇರಿಸಲು ಕಳೆದ 5 ವರ್ಷದಲ್ಲಿಯೇ ಜಮಾವಣೆಗೊಂಡ ಭಕ್ತರು ದುಪ್ಪಟ್ಟಾಗಿದೆ.
ಪ್ರತಿ ವರ್ಷದಂತೆ ದಕ್ಷಿಣ ಕನ್ನಡದ ಭಕ್ತರು ಎತ್ತಿನ ಗಾಡಿ ಶೃಂಗರಿಸಿ, ತಮ್ಮ ಬೇಡಿಕೆಯಾಗಿದ್ದ ಹರಿಕೆ ತೀರಿಸಿದರಲ್ಲದೇ, ಜಾತ್ರೆಗೆ ಸಾಂಪ್ರದಾಯಿಕ ಮೆರುಗು ತಂದರು. ಜಾತ್ರೆಯಲ್ಲಿ ಯಾವುದೇ ಅನಾಹುತವಾಗದಂತೆ ತಡೆಯುವ ಸಲುವಾಗಿ, ದೇವಸ್ಥಾನ ಅಭಿವದ್ಧಿ ಸಮಿತಿ, ಇಲಾಖಾ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪೊಲೀಸರು ಸುಸಜ್ಜಿತ ವ್ಯವಸ್ಥೆ ಕಲಿಸಿದ್ದರು.