ಕಾರವಾರ : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮೇ.27 ರಿಂದ ಜೂ.05 ರ ವರೆಗೆ ಕಾರವಾರದಿಂದ ಮಂಗಳೂರಿನವರೆಗೆ ಸೈಕಲ್ ಜಾಥಾ ಹಾಗೂ ಕಡಲ ತೀರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.
ಸೈಕಲ್ ಜಾಥಾ ಹಾಗೂ ಕಡಲ ತೀರ ಸ್ವಚ್ಛತಾ ಅಭಿಯಾನವು ಮೇ 27 ರಂದು ಕಾರವಾರ ಕಡಲ ತೀರದಲ್ಲಿ , ಮೇ. 28 ರಂದು ಗೋಕರ್ಣ ಕಡಲ ತೀರದಲ್ಲಿ, ಮೇ.29 ರಂದು ಕಾಸರಕೋಡ, ಹೊನ್ನಾವರ ಕಡಲ ತೀರದಲ್ಲಿ ಹಾಗೂ ಮೇ.30 ರಂದು ಮುರ್ಡೇಶ್ವರ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.