ಭಟ್ಕಳ: ರೋಟರಿ ಕ್ಲಬ್ ಭಟ್ಕಳ, ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಮಾರುತಿ ನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಸೆ.19 ಸೋಮವಾರದಿಂದ 25ರ ರವಿವಾರದ ತನಕ ಒಂದು ವಾರಗಳ ಅಕ್ಯೂಪ್ರಶರ್ ಮತ್ತು ವೈಬ್ರೇಶನ್ ತೆರಪಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಡಾ. ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ರಾಜಸ್ಥಾನದ ಡಾ. ಆರ್.ಪಿ. ಭಟ್ಟಿ, ಇವರು ಚಿಕಿತ್ಸೆಯನ್ನು ನೀಡಲಿದ್ದಾರೆ. ಯಾವುದೇ ಔಷದೋಪಚಾರವಿಲ್ಲದೇ ವ್ಯಾಧಿಗಳನ್ನು ಅಕ್ಯುಪ್ರಶರ್ ಚಿಕಿತ್ಸಾ ಪದ್ಧತಿಯಿಂದ ನಿವಾರಣೆಗೊಳಿಸಿಕೊಳ್ಳಬಹುದು
ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ದೇಹದ ಅತೀಭಾರ, ಡಯಾಬಿಟೀಸ್, ಅರ್ಧ ತಲೆನೋವು, ಕೀಲು ನೋವು, ಸಂಧಿವಾತ, ಪಿತ್ತವಾತ, ಬ್ಲಡ್ ಪ್ರೆಶರ್, ಅಪಚನ, ಮೊಣಕಾಲು ನೋವು, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ಮಲಬದ್ಧತೆ, ಅಸ್ತಮಾ, ಚಿಕನ್ ಗುನ್ಯಾ, ಅರ್ಧಾಂಗವಾಯು ಇತ್ಯಾದಿಗಳಿಗೆ ಚಿಕಿತ್ಸೆ ಲಭ್ಯವಿದ್ದು ಎಲ್ಲಾ ವಯಸ್ಸಿನವರೂ ಕೂಡಾ ಶಿಬಿರದಲ್ಲಿ ಭಾಗವಹಿಸಬಹುದು. ಒಬ್ಬ ರೋಗಿಯ ಚಿಕಿತ್ಸೆಗೆ ೧೫ ರಿಂದ ೨೦ ನಿಮಿಷಗಳು ಮಾತ್ರ ತಗುಲುತ್ತಿದೆ. ಭಟ್ಕಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆಯುವಂತೆ ರೋಟರಿ ಅಧ್ಯಕ್ಷ ಶ್ರೀನಿವಾಸ ಪಡಿಯಾರ್, ಕಾರ್ಯದರ್ಶಿ ರಾಜೇಶ ನಾಯಕ ಕೋರಿದ್ದಾರೆ.