ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಿದ್ದಾಪುರ ಕೆರೆಬೇಟೆ ಪ್ರಕರಣ. ಪೊಲೀಸರಿಂದ 11 ಜನರ ಬಂಧನ.

ಸಿದ್ದಾಪುರ ಕೆರೆಬೇಟೆ ಪ್ರಕರಣ. ಪೊಲೀಸರಿಂದ 11 ಜನರ ಬಂಧನ.

Tue, 31 May 2022 13:17:13  Office Staff   SO News

ಸಿದ್ದಾಪುರ : ಕಾನಗೋಡು ಗ್ರಾಮದಲ್ಲಿ  ಕೆರೆಬೇಟೆ ಪ್ರಕರಣಕ್ಕೆ ಸಂಬಂಧಿಸದಂತೆ ಪೊಲೀಸರು 11 ಜನರನ್ನ ಬಂಧಿಸಿದ್ದಾರೆ.  

ಮೀನು ಹಿಡಿಯಲು ದೇವಾಲಯ ಸಮಿತಿಯವರು 600 ರೂ. ಪ್ರವೇಶ ಶುಲ್ಕ ವಸೂಲಿ ಮಾಡಿ ಮೋಸ ಮಾಡಿದ್ದಾರೆಂದು ಜನ ಆಕ್ರೋಶಗೊಂಡಿದ್ದರು. ಅಲ್ಲದೇ  ಸ್ಥಳದಲ್ಲಿದ್ದ ವಸ್ತುಗಳನ್ನ ದ್ವಂಸ ಮಾಡಿದ್ದಲ್ಲದೇ ಸಿಕ್ಕ ಸಿಕ್ಕ ವಸ್ತುಗಳನ್ನ ದೋಚಿದ್ದರು.

 ಘಟನೆ ಸಂಬಂಧ ಈವರೆಗೆ ಒಟ್ಟು ಏಳು ದೂರು ದಾಖಲಾಗಿದೆ. ಪಕ್ಕದ ಹಾನಗಲ್, ಹಾವೇರಿ, ಸೊರಬ, ಸಾಗರದ ಜನರು ಆಗಮಿಸಿದ್ದರು. ಗಲಾಟೆ ಮಾಡಿದ ಇನ್ನು ಹಲವರಿಗಾಗಿ ಸಿದ್ದಾಪುರ ಪೊಲೀಸರು ಶೋಧ ನಡೆಸಿದ್ದಾರೆ.


Share: