ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾ ಉದ್ಯಮಿ ಅಶೋಕ ಕಾಮತ್

ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾ ಉದ್ಯಮಿ ಅಶೋಕ ಕಾಮತ್

Fri, 16 Jun 2023 06:04:12  Office Staff   SO News

ಭಟ್ಕಳ: ಅನಾರೋಗ್ಯದಿಂದ ಸಾವನ್ನಪ್ಪಿದ ತಾಲೂಕಿನ 
ವೆಂಕಟಾಪುರ ನೀಲಕಂಠದ ಜಿ.ಎಸ್.ಪಿ ಮುಖಂಡರು ಹಾಗೂ ಉದ್ಯಮಿಯೋರ್ವರು ತಮ್ಮ ಸಾವಿನ ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. 

ನೇತ್ರದಾನ ಮಾಡಿದ ವ್ಯಕ್ತಿಯನ್ನು ಅಶೋಕ ಕಾಮತ್ (67) ಎಂದು ತಿಳಿದು ಬಂದಿದೆ. ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ 15 ದಿನಗಳಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರು
ನೀರಕಂಠ ಸಾರ್ವಜನಿಕ  ಕ್ಷೇತ್ರದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ದೇಣಿಗೆಯ ಜೊತೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು ಹಾಗೂ ನೀರಕಂಠ ಹಾಗೂ ಶಿರಾಲಿ ಕಂಡಂತಹ ಅತ್ಯಂತ ಸರಳ ಸಜ್ಜನ ಸಮಾಜ ಸೇವಕರಾಗಿದ್ದರು. 

ಇವರ ಸಾವಿನ ಬಳಿಕ ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರು ಹಂಸ, ಅಹನ್ ಹಾಗೂ ಸಿಬ್ಬಂದಿಗಳು ಭಟ್ಕಳ ಸರಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. 

ಈ ಬಗ್ಗೆ ಮೃತರ ಸಹೋದರರಾದ  ಶಿವಾನಂದ ಕಾಮತ್ ಮಾತನಾಡಿ ನನ್ನ ಸಹೋದರ ದಾನ ಧರ್ಮ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದರು. ನಮ್ಮ ಊರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ನಮ್ಮ ಕುಟುಂಬದ ಎಲ್ಲರೂ ನೇತ್ರದಾನ ಮಾಡಲು ಅರ್ಜಿಯನ್ನು ತುಂಬಿದ್ದೇವೆ.ಕಳೆದ 15 ದಿನಗಳ ಹಿಂದಷ್ಟೇ ನನ್ನ ಸಹೋದರ ನಾನು ಸಾವನ್ನಪ್ಪಿದ ಮೇಲೆ ನನ್ನ ಕಣ್ಣನ್ನು ದಾನ ಮಾಡುವಂತೆ ಹೇಳಿದ್ದರು.ಅವರ ಆಸೆಯಂತೆ ಇಂದು ಅವರ ಕಣ್ಣನು ದಾನ ಮಾಡಿದ್ದೇವೆ ಎಂದರು 

ಜೀವಂತ ಇರುವಾಗ ದಾನ ಧರ್ಮ ಮಾಡುತ್ತಾ ತಮ್ಮೂರಿಗೆ ಆಸರೆಯಾಗಿದ್ದ ಅಶೋಕ ಕಾಮತ್ ಇಂದು ತಮ್ಮ ಸಾವಿನ ನಂತರ ಕೂಡ  ಕಣ್ಣನ್ನುದಾನ ಮಾಡುವುದರ ಮೂಲಲ ಸಾರ್ಥಕತೆ ಮೆರೆದಿದ್ದಾರೆ


Share: