ಭಟ್ಕಳ:ತಾಲೂಕಿನ ಶಿರಾಲಿಯ ಸಾರದಹೊಳೆಯಲ್ಲಿ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವರ ಐತಿಹಾಸಕ ಮಂದಿರ ಪುನರ್ ಪ್ರತಿಷ್ಥಾಪನೆ ಕಾರ್ಯ ಇಂದಿನಿಂದ 20 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ಈ ಹಿನ್ನೆಲೆ ಕಾರವಾದಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ತಂಡ ಬಂದು ದೇವಾಲಯ ಒಳಾಂಗಣ,ಹೊರಾಂಗಣ,ಸ್ವಾಮೀಜಿಯವರು ಪೀಠ,ಹೊರೆ ಕಾಣಿಕೆ ನೀಡುವ ಸ್ಥಳ,ಕಾರ್ಯಕ್ರಮ ನಡೆಯುವ ಸ್ಥಳ ಊಟದ ಸ್ಥಳ,ವಾಹನ ನೀಡುವ ಸ್ಥಳ ಹಾಗೂ ಎಲ್ಲೆಡೆ ಪರಿಶೀಲನೆ ಮಾಡಿದ್ದು ಪೋಲಿಸ್ ಬಂದೋಬಸ್ತ ಏರ್ಪಡಿಸಿ ತೀವ್ರ ನಿಗಾ ಇಟ್ಟಿದೆ.ದೇವಸ್ಥಾನ ಆಡಳಿತ ಕಮೀಟಿ ಅಗತ್ಯವಿದ್ದ ಕಡೆ ಸಿಸಿ ಕ್ಯಾಮರಾ ಕೂಡಾ ಅಳವಡಿಸಿ ನಿಗಾ ವಹಿಸಲಾಗಿದೆ.
ಈ ಸಂದರ್ಭದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಾದ ಅನಿಲ್ ನಾಯ್ಕ.
ಸಂಜು ಬೋವಿ, ಜಗನ್ನಾಥ ನಾಯ್ಕ, ರಮೇಶ ಸಿರ್ಸಿಕರ್, ಸಂತೋಷ ನಾಯ್ಕ, ಮಾಬ್ಲೆಶ್ವರ ಗೌಡ, ಪ್ರಶಾಂತ ಉಮಚಗಿ, ಶ್ವಾನ ಅಣಸಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.