ಕಾರವಾರ : ಸರ್ಕಾರಿ ಬಸ್ ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನ ಅಬಕಾರಿ ಅಧಿಕಾರಿಗಳು ಶುಕ್ರವಾರ ಕಾರವಾರದ ಸದಾಶಿವಗಢ ಬಳಿ ಬಂಧಿಸಿದ್ದಾರೆ
ಪಣಜಿಯಿಂದ ಸಾಗರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಮದ್ಯ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಅಬಕಾರಿ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ರವಿ ನಾಗರಾಜ (36), ಸಾಗರ ಗೋಕರ್ಣ (25) ಎಂಬುವವರು ಬ್ಯಾಗಿನಲ್ಲಿ ಮದ್ಯ ಸಾಗಿಸುತ್ತಿರೋದು ಗೊತ್ತಾಗಿದೆ. ಒಟ್ಟು ಸುಮಾರು 87.050 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮದ್ಯದ ಮೌಲ್ಯ 1ಲಕ್ಷ 25ಸಾ. ರೂ. ಎಂದು ಅಂದಾಜಿಸಲಾಗಿದೆ.
ಕಾರವಾರ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.