ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ, ಭಟ್ಕಳ 22ನೇ ವಾರ್ಷಿಕ ಮಹಾಸಭೆ

ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ, ಭಟ್ಕಳ 22ನೇ ವಾರ್ಷಿಕ ಮಹಾಸಭೆ

Wed, 21 Sep 2022 06:16:09  Office Staff   so news

ಭಟ್ಕಳ: ನಗರದ ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ಇದರ  2021-22 ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಿತು.
ವಾರ್ಷಿಕ ವರದಿಯನ್ನು ಅಧ್ಯಕ್ಷ ಶ್ರೀಧರ ಮಂಜು ಶೆಟ್ಟಿ  ಮಂಡಿಸಿದರು. ಸಂಘವು ಕಳೆದ ವರ್ಷಾಂತ್ಯಕ್ಕೆ 2372 ಸದಸ್ಯರನ್ನು ಹೊಂದಿದ್ದು ಶೇರು ಬಂಡವಾಳ ರೂ 84.63 ಲಕ್ಷಕ್ಕೆ ಏರಿರುತ್ತದೆ. ಆಕರ್ಷಕ ಬಡ್ಡಿದರದಲ್ಲಿ ಸಂಘವು ಠೇವುಗಳನ್ನು ಸ್ವೀಕರಿಸುತ್ತಿದ್ದು ವರ್ಷಾಂತ್ಯಕ್ಕೆ ಠೇವು ಸಂಗ್ರಹಣೆ ರೂ 2454.03 ಲಕ್ಷದಷ್ಟಾಗಿದೆ. ದುಡಿಯುವ ಬಂಡವಾಳ ರೂ 2917.56 ಲಕ್ಷದಷ್ಟಾಗಿದ್ದು, ವರದಿ ವರ್ಷದ ಕೊನೆಗೆ ಸಂಘವು ನೀಡಿರುವ ಎಲ್ಲಾ ವಿಧವಾದ ಸಾಲಗಳ ಮೊತ್ತ ರೂ 2066.62 ಲಕ್ಷದಷ್ಟಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಸಂಘವು ವರ್ಷದ ಕೊನೆಗೆ 98.90% ರಷ್ಟು ವಸೂಲಾತಿ ಮಾಡಿರುತ್ತದೆ. ವರ್ಷದ ಕೊನೆಗೆ ರೂ 95.26 ಲಕ್ಷ ನಿವ್ವಳ ಲಾಭ ಗಳಿಸಿರುವ ಸಂಘವು ತನ್ನೆಲ್ಲಾ ಶೇರುದಾರ ಸದಸ್ಯರಿಗೆ ವರದಿಯ ವರ್ಷಕ್ಕೆ 10% ರಷ್ಟು ಲಾಭಾಂಶವನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಶಂಕರ ಶೆಟ್ಟಿ, ವೆಂಕಟೇಶ ಶೆಟ್ಟಿ,ಮಹೇಶ ಶೆಟ್ಟಿ, ಮಂಜುನಾಥ ಶೆಟ್ಟಿ, ಮೋಹನ ಶೆಟ್ಟಿ, ದತ್ತಾತ್ರೇಯ ತೆರ್ನಮಕ್ಕಿ, ವಿಷ್ಣು ಶೆಟ್ಟಿ, ವಿಶ್ವನಾಥ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದು ಸರ್ವ ಸದಸ್ಯರ ಪರವಾಗಿ ಸಂಘದ ಅಭಿವೃದ್ದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಸಂಘಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ ಎಲ್ಲಾ ಹಿತೈಷಿಗಳಿಗೂ ಕೃತಜ್ಞತೆಗಳನ್ನು ಅರ್ಪಿಸಿದ ಅಧ್ಯಕ್ಷರು ಮುಂಬರುವ ದಿನಗಳಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಆಡಳಿತ ಸಮಿತಿಯ ಎಲ್ಲಾ ಸದಸ್ಯರ ಹಾಗೂ ಸರ್ವಸದಸ್ಯರ ಸಂಪೂರ್ಣ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನಾರಾಯಣ ಮಂಜುನಾಥ ಶೆಟ್ಟಿ, ನಿರ್ದೇಶಕರುಗಳಾದ ಗಣಪತಿ ವಿಠ್ಠಲ ಶೆಟ್ಟಿ, ರಾಧಾಕೃಷ್ಣ ಕುಪ್ಪಯ್ಯ ಶೆಟ್ಟಿ ಶ್ರೀಧರ ತಿಮ್ಮಪ್ಪ ಶೆಟ್ಟಿ,  ಕೃಷ್ಣಮೂರ್ತಿ ಶೇಷಗಿರಿ ಶೆಟ್ಟಿ, ಉದಯ ನಾಗೇಶ ಶೆಟ್ಟಿ, ಲಕ್ಷ್ಮಣ ಮಂಜಯ್ಯ ಶೆಟ್ಟಿ ಶ್ರೀಮತಿ ಉಷಾ ಉದಯ ಶೆಟ್ಟಿ ಹಾಗೂ ಶ್ರೀಮತಿ ಗೀತಾ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು. ಸಭೆಯ ಕೊನೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ  ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಗಣೇಶ ಎಮ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.


Share: