ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶ್ರೀನಿವಾಸಪುರ: ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕಗಳ ಉದ್ಘಾಟನೆ

ಶ್ರೀನಿವಾಸಪುರ: ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕಗಳ ಉದ್ಘಾಟನೆ

Tue, 20 Dec 2022 01:43:11  Office Staff   Shabbir Ahmed

ಶ್ರೀನಿವಾಸಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕವನ್ನು ಕೋಮುಲ್ ತಾಲ್ಲೂಕು ನಿರ್ದೇಶಕರಾದ ಎನ್. ಹನುಮೇಶ್ ರವರು ಉದ್ಘಾಟನೆ ಮಾಡಿ ರವರು ಮಾತನಾಡಿ, ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕದ ಯೂನಿಟ್ ಧರ 2.5 ಲಕ್ಷ ಘಟಕವನ್ನು ಒಕ್ಕೂಟದಿಂದ ಶೇ.100 % ರಿಯಾಯತಿ ಧರದಲ್ಲಿ ಸಂಘಗಳಿಗೆ ಸರಬರಾಜು ಮಾಡಿಸಿ, ಮಿಲ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ 50,000 /- ರೂಗಳ ಸಹಾಯಧನವನ್ನು ನೀಡಿರುತ್ತಾರೆ . ಇದರ ಜೊತೆಗೆ ಒಕ್ಕೂಟದಿಂದ ಪ್ರತಿ ಲೀಟರ್‌ಗೆ 0.30 ಪೈಸೆಯಂತೆ ಸಂಘಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಈ ಮೊತ್ತದಲ್ಲಿ ಪ್ರತಿ ಲೀಟರ್‌ಗೆ 0.10 ಪೈಸೆಯಂತೆ ಹಾಲು ಕರೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುವುದು, ಉಳಿಕೆ 0.20 ಪೈಸೆ ಯಂತ್ರಗಳ ನಿರ್ವಹಣೆ ವೆಚ್ಚಕ್ಕಾಗಿ ವಿನಿಯೋಗಿಸಲು ಒಕ್ಕೂಟದಿಂದ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕಗಳನ್ನು ಸಂಘಗಳಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿರುತ್ತಾರೆ.

ಉಪ ವ್ಯವಸ್ಥಾಪಕರಾದ ಕೆ.ಎಂ.ಮುನಿರಾಜು ರವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಹಾಲು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಸಾಕಾಣಿಕೆ ಮಾಡಿ ತಮ್ಮ ತಮ್ಮ ಆರ್ಥಿಕ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಹಾಗೂ ಸ್ವಾವಲಂಬಿಗಳಾಗಿ ಜೀವನ ನಡೆಸಲು ಹಾರಿ ದೀಪವಾಗಿರುತ್ತದೆ ಹಾಗೂ ವೈಜ್ಞಾನಿಕವಾಗಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕಗಳಲ್ಲಿ ಹಾಲು ಕರೆಯುವ ವ್ಯವಸ್ಥೆ ಮಾಡಿರುವುದರಿಂದ ರಾಸುಗಳ ಆರೋಗ್ಯ , ಹಾಲಿನ ಗುಣಮಟ್, ಶುದ್ಧತೆ ಪರಿಣಾಮಕಾರಿಯಾಗಿ ಕಾಪಾಡಿ ಗ್ರಾಹಕರಿಗೆ ಪರಿಶುದ್ಧವಾದ ಹಾಲನ್ನು ಪೂರೈಕೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋಮುಲ್ ಮಾಜಿ ನಿರ್ದೇಶಕರು ದ್ವಾರಸಂದ್ರ ಸಿ.ಮುನಿವೆಂಕಟಪ್ಪ, ಕೇತಗಾನಹಳ್ಳಿ ನಾಗರಾಜ್ ರವರು, ಉಪ ವ್ಯವಸ್ಥಾಪಕರು (ಬಿ.ಎಂ.ಸಿ.ಇಂಜಿನಿಯರಿಂಗ್) ಪಿ.ಮೋಹನ್, ವಿಸ್ತರಣಾಧಿಕಾರಿಗಳಾದ ಪಿ.ಕೆ.ನರಸಿಂಹರಾಜು, ಎನ್.ಶಂಕರ್, ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ, ಹಾಗೂ ಎಲ್ಲಾ ನಿರ್ದೇಶಕರು, ಹಾಲು ಉತ್ಪಾದಕರು, ಗ್ರಾಮಸ್ಥರು, ಸಂಘದ ಸಿಬ್ಬಂದಿ ಹಾಜರಿದ್ದರು


Share: