ಬೆಂಗಳೂರು, ಫೆಬ್ರವರಿ ೧೨:ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ಮಸಿ ಬಳಿದ ಪ್ರಕರಣ ಪೂರ್ವ ನಿಯೋಜಿತ ಸಂಚು ಎಂದು ಹೇಳಿರುವ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಈ ಪ್ರಕರಣದ ಹಿಂದೆ ಯಾರಿದ್ದಾರೆ, ಇದರಲ್ಲಿ ಯಾರ ಕೈವಾಡವಿದೆ ಎನ್ನುವುದನ್ನು ಪತ್ತೆ ಹಚ್ಚಲಾಗುವುದು ಎಂದರು.
ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಮೊದಲೇ ಮಾಹಿತಿ ನೀಡಲಾಗಿದೆ ಹಾಗಾಗಿ ಮಾಧ್ಯಮಗಳು ಈ ಬಗ್ಗೆ ಪೊಲೀಸರಿಗೆ ಮಾಹತಿ ನೀಡುವುದು ಅವರ ಕರ್ತವ್ಯ ಎಂದರು.
ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಹೇಳಿದರು.
ಪ್ರೇಮಿಗಳ ದಿನಾಚರಣೆ ಅಡ್ಡಿ ಪಡಿಸುವುದು ಸರಿಯಲ್ಲ. ದಿನಾಚರಣೆ ಆಚರಿಸುವುದು ಬಿಡುವುದು ಅವರ ಅವರ ವಿವೇಚನೆಗೆ ಬಿಟ್ಟಿದ್ದು, ಪೊಲೀಸರು ಪ್ರೇಮಿಗಳಿಗೆ ರಕ್ಷಣೆ ನೀಡಲಿದ್ದಾರೆ ಎಂದರು.
ನ್ಯಾಯಾಂಗ ಬಂಧನಕ್ಕೆ :
ಪ್ರಮೋದ್ ಮುತಾಲಿಕ್ ಮಸಿ ಬಳಿದ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮೂವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಪ್ರಮೋದ್ ಮುತಾಲಿಕ್ಗೆ ಮಸಿ ಬಳಿದ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಿವಾಸ್ (೩೦) ಮತ್ತೊಬ್ಬ ಪದಾಧಿಕಾರಿ ಶ್ರೀನಿವಾಸ್ (೩೦) ಇವರಿಬ್ಬರನ್ನು ಈ ತಿಂಗಳ ೨೬ ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.