ಹಾಸನ, ಡಿಸೆಂಬರ್ 17:ಕೃಷಿ ಮಹಾವಿದ್ಯಾಲಯದಲ್ಲಿ ಚಾಲನೆಗೊಂಡ ಕೃಷಿ ಮಹಾವಿದ್ಯಾಲಯ, ಬೆಂಗಳೂರು ಅಂತರ ಕಾಲೇಜು ಯುವಜನೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಈ ಯುವಜನೋತ್ಸವದಲ್ಲಿ ಸಾಂಸ್ಕೃತಿಕ ಪ್ರಕಾರಗಳಾದ ಲಲಿತಕಲೆ, ಸಾಹಿತ್ಯಕ, ಸಂಗೀತ ಮತ್ತು ರಂಗಕಲೆಗಳ ಒಟ್ಟು ೧೮ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ ಶಿವಮೊಗ್ಗ, ಹಾಸನ, ಮಂಡ್ಯ ಜಿ.ಕ.ವಿ.ಕ. ಸ್ನಾತಕ ಪದಿವ ಮತ್ತು ಸ್ನಾತಕೋತ್ತರ ಪದವಿ ತಂಡಗಳು, ಹಾಗೂ ರೇಷ್ಮೆ ಕೃಷಿ ಮಹಾವಿದ್ಯಾಲಯ, ಚಿಂತಾಮಣಿ, ಅರಣ್ಯ ಕಾಲೇಜು, ಪೊನ್ನಂಪೇಟೆಯ ಒಟ್ಟು ಏಳು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.
೧೨ರಂದು ಸಮಾರೋಪ ಸಮಾರಂಭ ನಡೆಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಜಿ.ಚೆಂಗಪ್ಪ ಅಧ್ಯಕ್ಷತೆ ವಹಿಸಿ ಸಮಗ್ರ ಜನಪದ ಸಾಹಿತ್ಯ ಸಂಪುಟ ಪ್ರಕಟಣಾಸಮಿತಿಯ ಅಧ್ಯಕ್ಷ ಹೆಚ್.ಎಸ್.ರಾಮಚಂದ್ರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಳಿವಿನಂಚಿನಲ್ಲಿರುವ ಜನಪದ ಕಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲ ಶ್ರಮಿಸಬೇಕೆಂದು ಕರೆ ನೀಡಿದರು.
ಅತಿಥಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಲ್ಲ ರಂಗದಲ್ಲಿ ಮುಂದಿದ್ದಾರೆ. ಅವರು ಕೃಷಿ ಜೊತೆಗೆ ಮನಃಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರಗಳನ್ನು ಆಭ್ಯಾಸಮಾಡುವುದರಿಂದ ವ್ಯಕ್ತಿತ್ವ ವಿಕಸನಗೊಂಡು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯ ಅತ್ತಿಹಳ್ಳಿ ದೇವರಾಜು ಕೆ.ಸಿ.ಶಂಕರೇಗೌಡ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಹಾಸನ ಕೃಷಿ ಮಹಾವಿದ್ಯಾಲಯವು ಒಟ್ಟಾರೆ ಪ್ರಥಮ ಸ್ಥಾನಗಳಿಸಿ ವಿನ್ನರ್ ಚಾಂಪಿಯನ್‌ಶಿಪ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಶಿವಮೊಗ್ಗ ಕೃಷಿ ಮಹಾವಿದ್ಯಾಲಯವು ದ್ವಿತೀಯ ಸ್ಥಾನಗಳಿಸಿ ರನ್ನರ್ ಆಫ್ ಸ್ಥಾನ ಉಳಿಸಿಕೊಂಡಿತು.
ಸಮಾರಂಭದಲ್ಲಿ ವಿವಿಧ ಕಾಲೇಜುಗಳ ಡೀನ್‌ಗಳು ಉಪಸ್ಥಿತರಿದ್ದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಂ.ಎ.ಶಂಕರ್ ಉಪಸ್ಥಿತಿರಿದ್ದರು. ಸ್ವಾಗತವನ್ನು ಡಾ.ಕೆ.ವೆಂಕಟಯ್ಯ ಮಾಡಿದರು. ವಂನಾರ್ಪಣೆಯನ್ನು ಡಾ.ಮಹಾಬಲೇಶ್ವರ ಹೆಗಡೆ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಡಾ.ಗೋವಿಂದ ಗೌಡ, ವಿ.ಮತ್ತು ಡಾ.ಎ.ಪಿ.ಮಲ್ಲಿಕಾರ್ಜುನ ಗೌಡ ಮಾಡಿದರು.