ಧಾರವಾಡ : ಗೊಬ್ಬರಗುಂಪಿ ಗ್ರಾಮದಲ್ಲಿ ಅಕ್ಟೋಬರ್ 10 ರಂದು ಯಾರೋ ಮಹಿಳೆ ಆರಬಳ್ಳಿ ಇವರ ಹಿತ್ತಲದ ರಸ್ತೆಯ ಬದಿಯಲ್ಲಿ ನವಜಾತಾ ಗಂಡು ಶಿಶುವನ್ನು ಬಿಟ್ಟು ಹೋಗಿದ್ದು, ಪ್ರಕರಣ ದಾಖಲಾಗಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಮೌಖಿಕ ಆದೇಶದನ್ವಯ ಮಗುವನ್ನು ಅಮೂಲ್ಯ (ಜಿ) ಶಿಶುಗೃಹ ಸಂಸ್ಥೆಗೆ ತಾತ್ಕಾಲಿಕ ಪಾಲನೆ-ಪೋಷಣೆಗಾಗಿ ದಾಖಲಿಸಲಾಗಿದೆ.
ಮಗುವಿನ ಪಾಲಕರು, ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆದ್ದರಿಂದ ಮಗುವಿನ ಪಾಲಕರು, ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 02 ತಿಂಗಳ ಅವಧಿ ಮುಗಿಯುವದರ ಒಳಗಾಗಿ ಅಮೂಲ್ಯ(ಜಿ) ಶಿಶುಗೃಹ ಹುಬ್ಬಳ್ಳಿ ಅಧೀಕ್ಷಕರನ್ನು ಅಥವಾ ನವಲಗುಂದ ಪೊಲೀಸ ಠಾಣೆಯನ್ನು ಸಂಪರ್ಕಿಸಬಹುದು. ಒಂದು ವೇಳೆ ಯಾರೂ ವಾರಸದಾರರು ಬಾರದ ಪಕ್ಷದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.