ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರಸಿ: ನೀರು ಕೇಳುವ ನೆಪದಲ್ಲಿ ಬಂಗಾರದ ಸರ ಅಪಹರಿಸಿದ ದರೋಡೆಕೋರ.

ಶಿರಸಿ: ನೀರು ಕೇಳುವ ನೆಪದಲ್ಲಿ ಬಂಗಾರದ ಸರ ಅಪಹರಿಸಿದ ದರೋಡೆಕೋರ.

Thu, 07 Sep 2023 15:52:41  Office Staff   SO News

ಶಿರಸಿ: ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳಲು ನೆಪದಲ್ಲಿ, ಮಾಜಿ ಸಂಸದರ ಪತ್ನಿಯ ಬಂಗಾರದ ಸರವನ್ನು ಅಪಹರಿಸಿದ ಘಟನೆ ನಗರದ ಯಲ್ಲಾಪುರ ನಾಕಾದಲ್ಲಿ ಬುಧವಾರ ನಡೆದಿದೆ.

ಮಾಜಿ ಸಂಸದ ದೇವರಾಯ ನಾಯ್ಕ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಾಜಿ ಸಂಸದರ ಪತ್ನಿ ಗೀತಾ ನಾಯ್ಕ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪ ಮಾಡಿಕೊಂಡು ಬಂದಿದ್ದ ಈ ವೇಳೆ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತು ಪರಾರಿಯಾಗಿದ್ದಾನೆ.

ಅಂದಾಜು 3 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಸರವಾಗಿದೆ. ಈ ವಿಷಯವನ್ನ ಅವರ ಮಗನಿಗೆ ತಿಳಿಸಿದಾಗ  ವೈದ್ಯರಾಗಿರುವ ಅವರ ಮಗ ನಾಗರಾಜ ನಾಯ್ಕ ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶಿರಸಿ  ಮಾರುಕಟ್ಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Sirsi: Robber flees after snatching Gold Necklace by posing as a water seeker


Share: