ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರವಾಡದ ಕೆಪಿಎಸ್ ಶಾಲೆಗೆ ಸಿಇಓ ಭೇಟಿ

ಶಿರವಾಡದ ಕೆಪಿಎಸ್ ಶಾಲೆಗೆ ಸಿಇಓ ಭೇಟಿ

Thu, 02 Jun 2022 04:31:03  Office Staff   SO News

ಕಾರವಾರ :  ತಾಲೂಕಿನ ಶಿರವಾಡ ಪಂಚಾಯತಿಗೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ ಅವರು ಭೇಟಿ ನೀಡಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಶಾಲಾ ಶೌಚಾಲಯ, ಕಸ ವಿಲೇವಾರಿ ಘಟಕ ಕಾಮಗಾರಿ ಪರಿಶೀಲನೆ ನಡೆಸಿದರು.

 ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಕ್ಕೆ ತೆರಳಿ ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಅಡುಗೆ ಕೋಣೆ ವ್ಯವಸ್ಥೆ, ಬಿಸಿಯೂಟಕ್ಕೆ ಬಳಸುವ ತೊಗರಿ ಬೇಳೆ, ಅಕ್ಕಿ, ಎಣ್ಣೆ, ತರಕಾರಿಯನ್ನು ಪರಿಶೀಲಿಸಿದರು.

ಈ ವೇಳೆ ಬಿಇಒ ಶಾಂತೇಶ ನಾಯಕ, ಸಿಡಿಪಿಒ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಂದೀಪ್ ಕೊಟಾರ್ಕರ್, ಅರುಣಾ ಎನ್., ಜಿಲ್ಲಾ ಐಇಸಿ ಸಂಯೋಜಕ ಸಚಿನ್ ಬಂಟ್, ಟಿಸಿ ಸೂರಜ್ ಗುನಗಿ, ಟಿಎಇ ಅರ್ಜುನ್ ನಾಯ್ಕ್, ತಾಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share: