ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಿಐಟಿಯು ಸಂಘಟನೆಯ ವ್ಯಾಪ್ತಿ, ಚಳುವಳಿ ವಿಸ್ತಾರಗೊಂಡಿದೆ, ತೀವ್ರಗೊಂಡಿದೆ ಸದೃಢಗೊಳಿಸಿ ಪ್ರಜಾಪ್ರಭುತ್ವ ವಿಧಾನದ ಕಾರ್ಯಚರಣೆಯನ್ನು ವಿಸ್ತರಿಸುವುದು ಆದ್ಯತೆಯ ವಿಷಯವಾಗಿದೆ. ವಿಸ್ತಾರಗೊಂಡ ಸಂಘಟನೆಯನ್ನು , ಕ್ರೋಢೀಕರಿಸುವುದು, ಬಲಿಷ್ಠ ಆಂದೋಲನಕ್ಕೆ ಸಂಘಟನೆಯನ್ನು ಸಜ್ಜುಗೊಳಿಸುವುದು, ತಳಹಂತದ . ಸಿಐಟಿಯು ಅಖಿಲ ಭಾರತ 13ನೇ ಸಮ್ಮೇಳನ 17 ರಿಂದ 21 ಮಾರ್ಚ 2010 ರಂದು ಪಂಜಾಬ್ ರಾಜ್ಯದ ಚಂಢೀಗಡ ನಗರದಲ್ಲಿ ನಡೆಯಲಿದೆ. 3ವರ್ಷಗಳಿಗೊಮ್ಮೆ ದೇಶ ಮಟ್ಟದಿಂದ ಎಲ್ಲಾ ಹಂತಗಳಲ್ಲಿ ಸಮ್ಮೇಳನಗಳನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆಯನ್ನು ಬಲಪಡಿಸುವ ನಿರಂತರ ಪ್ರಕ್ರಿಯೆ ನಡೆಯುತ್ತಿದೆ. ಅಖಿಲ ಭಾರತ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ 11ನೇ ರಾಜ್ಯ ಸಮ್ಮೇಳನ ಮಂಡ್ಯ ನಗರದಲ್ಲಿ 12-14, ಫೆಬ್ರವರಿ 2010ರಂದು ನಡೆಯುತ್ತಿದೆ.ನೇ ಕರ್ನಾಟಕ ರಾಜ್ಯ ಸಮ್ಮೇಳನವು 3-6, ಸೆಪ್ಟೆಂಬರ್ 2006 ರಂದು ಬಳಾರಿನಗರದಲ್ಲಿ ನಡೆದಿದೆ. 10ನೇ ಸಮ್ಮೇಳನದ ನಂತರದ ಅವಧಿಯಲ್ಲಿ ಸಿಐಟಿಯು ಬೆಳವಣಿಗೆ, ಹೋರಾಟಗಳ ಮುನ್ನಡೆ ಸಂಘಟನಾ ವಿಸ್ತರಣೆ, ಕ್ರೋಢೀಕರಣ, ಪ್ರಜಾಪ್ರಭುತ್ವ ಕಾರ್ಯ ನಿರ್ವಹನೆಯ ಅನುಭವ, ಸಾಮಾಜಿಕ ಪ್ರಶ್ನೆಗಳಲ್ಲಿ ಮಧ್ಯಪ್ರವೇಶ, ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವ ದಿಶೆಯಲ್ಲಿ ಪ್ರಯತ್ನಗಳು ಒಟ್ಟಾರೆ ಕಾರ್ಮಿಕ ಚಳವಳಿಯು ಸಮಾಜ ಬದಲಾವಣೆಯ ಪ್ರಕ್ರಿಯೆಯಲ್ಲಿ ವಹಿಸಿದ ಪಾತ್ರದ ಕುರಿತಾಗಿ 11ನೇ ರಾಜ್ಯ ಸಮ್ಮೇಳನ ಪರಾಮರ್ಶೆ ಮಾಡುತ್ತದೆ. 10ನೇ ರಾಜ್ಯ ಸಮ್ಮೇಳನದ ನಂತರ ಸಿಐಟಿಯು ನಿರಂತರ ಕ್ರಿಯಾಶೀಲವಾಗಿ ವಿವಿಧ ಕಾರ್ಮಿಕರನ್ನು ಹೋರಾಟದ ಹಾದಿಯಲ್ಲಿ ತೊಡಗಿಸುವ ವಿಚಾರದಲ್ಲಿ ಮುನ್ನಡೆ ಸಾಧಿಸಲಾಗಿದೆ. ಸಿಐಟಿಯು ಅಖಿಲ ಭಾರತ 12ನೇ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಕರ್ನಾಟಕದಲ್ಲಿ ರಾಜಧಾನಿ ನಗರ ಬೆಂಗಳೂರಲ್ಲಿ ನಡೆಸಲಾಗಿದೆ. ಅಖಿಲ ಭಾರತ ಸಮ್ಮೇಳನ ಬೆಂಗಳೂರಿನಲ್ಲಿ ನಡೆಸಬೇಕಾದ ಸಂಪನ್ಮೂಲ ಸಂಗ್ರಹಣೆ, ತಯಾರಿ ಪ್ರಕ್ರಿಯೆಯಲ್ಲಿ ಇಡೀ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಘಟನೆ ವಿಸ್ತರಿಸಲು ಸಹಕಾರಿಯಾಗಿದೆ. ಅದರಲ್ಲಿ ವಿಶೇಷವಾಗಿ ಬೆಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ಸಂಘಟನೆಗೆ ಪ್ರದೇಶವಾರಾಗಿ ಸರಿಯಾದ ಚೌಕಟ್ಟಿನಲ್ಲಿ ವ್ಯವಸ್ಥಿತ ರೂಪ ನೀಡಲು ಸಾಧ್ಯವಾಗಿದೆ.ಸದಸ್ಯತ್ವದ ಬೆಳವಣಿಗೆ ಕಳೆದ ಸಿಐಟಿಯು ರಾಜ್ಯ ಸಮ್ಮೇಳನದಲ್ಲಿ
1,16,167 ಸದಸ್ಯತ್ವ ಈಗ 2008ರ ಡಿಸೆಂಬರ್ ವರೆಗಿನ ಸದಸ್ಯತ್ವ 1,60,695ಕ್ಕೆ ಏರಿಕೆ ಆಗಿದೆ. ಸದಸ್ಯತ್ವ ಹೆಚ್ಚಳ ಜಿಲ್ಲಾ ಮಟ್ಟಗಳಲ್ಲಿ ಹಾಗೂ ರಾಜ್ಯ ಸಂಘಗಳ ಮೂಲಕ ರಾಜ್ಯವ್ಯಾಪಿಯಾಗಿಯೂ ವಿಸ್ತಾರಗೊಂಡಿದೆ. ಜಿಲ್ಲೆಗಳಿಂದ ಬಂದಿರುವ ಸದಸ್ಯತ್ವವು 76,136 ರಿಂದ 92,226 ಸದಸ್ಯತ್ವಕ್ಕೆ ಏರಿಕೆ ಆಗಿದೆ. ರಾಜ್ಯ ಸಂಘಗಳ ಮೂಲಕ ಸದಸ್ಯತ್ವ 40,031 ರಿಂದ 68,469ಕ್ಕೆ ಹೆಚ್ಚಳವಾಗಿದೆ. ಸಿಐಟಿಯು ಸದಸ್ಯತ್ವ ಹೆಚ್ಚಳವಾಗಿರುವುದಕ್ಕೆ ಮುಖ್ಯವಾಗಿ ಹೋರಾಟಗಳ ನಿರಂತರತೆ ಹಾಗೂ ತೀವ್ರತೆಯು ಮುಖ್ಯವಾಗಿದೆ
. ಈ ಕಾಲಾವಧಿಯಲ್ಲಿ ಸಿಐಟಿಯು ನೇತೃತ್ವದ ಹೋರಾಟಗಳನ್ನು ಗಮನಿಸಿದರೇ ಅದಕ್ಕೆ ತಕ್ಕಂತೆ ಸದಸ್ಯತ್ವ ಏರಿಕೆ ಸಾಕಷ್ಟು ಆಗಿಲ್ಲವೆಂಬುದು ಕಂಡು ಬರುತ್ತದೆ. ಅಂದರೆ ಹೋರಾಟಗಳನ್ನು ನಡೆಸಲು ನೀಡಿರುವ ಗಮನಕ್ಕೆ ತಕ್ಕಂತೆ ಸಂಘಟನಾ ಅಗತ್ಯಗಳಿಗೆ ಗಮನ ಒತ್ತು ನೀಡಲಾಗಿಲ್ಲವೆಂಬುದು ಸ್ಪಷ್ಟವಾಗುತ್ತಿದೆ. 2006ರಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನದ ತಯಾರಿ 2007ರ ಜನವರಿವರೆಗಿನ ಸಿದ್ಧತೆಗಳು ರಾಜ್ಯದಲ್ಲಿ ನಮಗೆ ಎಷ್ಟೆಲ್ಲಾ ಸಾಮರ್ಥ್ಯ ಸಾಧ್ಯತೆಯಿದೆ ಎಂಬುದನ್ನು ಅರ್ಥಮಾಡಿಕೊಳಲು ಅವಕಾಶ ಮಾಡಿಕೊಟ್ಟಿತು. ಅನಂತರದಲ್ಲಿ ಕನಿಷ್ಠ ವೇತನ, ಗುತ್ತಿಗೆ ಪದ್ಧತಿ ರದ್ಧತಿ, ನಿವೇಶನಕ್ಕಾಗಿ, ಎಲ್ಲಿ ಕಾರ್ಮಿಕರು, ರೇಷನ್ ಕಾರ್ಡ್‌ಗಾಗಿ ಕಾರ್ಮಿಕ ಕಾನೂನುಗಳ ಜಾರಿಗಾಗಿ, ಅಸಂಘಟಿತ ಕಾರ್ಮಿಕರ ಸೇವಾ ನಿಯಮಾವಳಿ ಒಳಗೊಂಡ ಸಮಗ್ರ ಕಾಯಿದೆಗಾಗಿ, ನೇರ ಸರ್ಕಾರಿ ನೇಮಕಾತಿಯಲ್ಲಿ ತೀವ್ರ ಶೋಷಣೆಗೆ ಒಳಗಾಗಿ ದುಡಿಯುತ್ತಿರುವ ಅಂಗನವಾಡಿ, ಗ್ರಾಮ ಪಂಚಾಯಿತಿ, ಬಿಸಿಯೂಟ ನೌಕರರ ಜ್ವಲಂತ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ವಿವಿಧ ಹಂತದ ಹೋರಾಟಗಳು ರಾಜ್ಯದಲ್ಲಿಯೇ ಸಿಐಟಿಯುಗೆ ವಿಶೇಷ ಸ್ಥಾನ ಮಾನವನ್ನೇ ಒದಗಿಸಿಕೊಟ್ಟಿದೆ. ಸೆಪ್ಟೆಂಬರ್ 15, 2009ರಂದು ಜಿಲ್ಲಾ ಮಟ್ಟದಲ್ಲಿ ನಡೆಸಿದ ಸಮಧೀರ ಹೋರಾಟ ರಾಜ್ಯದ ಜನತೆಯ ಗಮನ ಸೆಳೆಯಲು ಯಶಸ್ವಿಯಾಗಿದೆ. ಈ ಹೋರಾಟಕ್ಕಾಗಿ 2008ರ ನವೆಂಬರ್ 7 ರಿಂದ ಆರಂಭಿಸಿ ನಡೆಸಿದ ಸಹಿ ಸಂಗ್ರಹ ಸುಮಾರು 10 ಲಕ್ಷ ಸಹಿಗಳ ಸಂಗ್ರಹ ಮಾಡಿದ್ದಲ್ಲದೆ ಫೆಬ್ರವರಿ 5, 2009ರಂದು ಇತ್ತೀಚಿನ ಕಾಲಾವಧಿಯಲ್ಲೇ ಬೃಹತ್ ಪ್ರಮಾಣದಲ್ಲಿ 40,000 ಕಾರ್ಮಿಕರ ಭಾಗವಹಿಸುವಿಕೆಯೊಂದಿಗೆ ರಾಲಿಯಲ್ಲಿ ಬೆಂಗಳೂರಿನಲ್ಲಿ ನಡೆಸಲಾಗಿದೆ. ಅನಂತರ ಮಾರ್ಚ 5 ರಿಂದ 4 ವರೆಗಿನ ಪ್ರತಿಭಟನಾ ಧರಣಿ ಯಶಸ್ವಿಯಾಗಿ ರಾಜ್ಯ ವ್ಯಾಪಿ ನಡೆಸಲಾಗಿದೆ. ಈ ನಡುವೆ ಅಖಿಲ ಭಾರತ ಮುಷ್ಕರಗಳನ್ನು ರಾಜ್ಯದ 140 ತಾಲ್ಲೂಕುಗಳಲ್ಲಿ ನಡೆಸುವ ಮೂಲಕ ಕಾರ್ಮಿಕರ ನಡುವೆ ಸಿಐಟಿಯು ಪ್ರಭಾವ ವಿಸ್ತರಿಸಲು ಈ ಕಾಲಾವಧಿಯಲ್ಲಿ ನಿರಂತರ ಚಟುವಟಿಕೆ ನಡೆಸಲಾಗಿದೆ. ಇದರಿಂದಾಗಿ ಬಿ.ಇ.ಎಲ್., ಬಿ.ಇ.ಎಂ.ಎಲ್., ಕೆ.ಜಿ.ಎಫ್. ಗಳಲ್ಲಿದ್ದ ಪ್ರಭಾವ ಹೆಚ್.ಎ.ಎಲ್.ಗೆ ವಿಸ್ತರಣೆಗೊಂಡು ಸಾಮಾನ್ಯ ಪ್ರಶ್ನೆಗಳ ಆಧಾರದಲ್ಲಿ ಜೆಎಎಫ್‌ನ್ನು ಹೋರಾಟಗಳಿಗೆ ತೊಡಗಿಸಲು ಸಾಧ್ಯವಾಗಿದೆ. ಅಲ್ಲದೇ ರಕ್ಷಣಾ ವಲಯದ ಕೈಗಾರಿಕೆಗಳಲ್ಲಿ ಪರಿಣಾಮಕಾರಿ ಮಧ್ಯಪ್ರವೇಶಕ್ಕೆ ಪ್ರಯತ್ನಗಳು ನಡೆದಿದೆ. ಈ ಕಾಲಾವಧಿಯಲ್ಲಿ ಘನ ಕೈಗಾರಿಕೆಗಳಲ್ಲಿ ಸಿಐಟಿಯು ಪುನಃ ನಾಯಕತ್ವ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ.ತೀವ್ರ ಚಳುವಳಿಯತ್ತ
.... ಸಿಐಟಿಯುನ ಚಟುವಟಿಕೆಗಳ ಮೂಲಕ ಸಂಘಗಳನ್ನು ಕಟ್ಟುವುದಷ್ಟೇ ಅಲ್ಲ ಚಳುವಳಿ ಕಟ್ಟಿ ಮುನ್ನಡೆಸಬೇಕೆಂಬ ಪರಿಕಲ್ಪನೆಯ ದಿಶೆಯಲ್ಲಿ ಪ್ರಗತಿಯಾಗಿದೆ. ಕಾರ್ಖಾನೆವಾರು, ವೃತ್ತಿವಾರು, ಹೋರಾಟಗಳಷ್ಟೇ ಸೀಮಿತವಾಗಿದೆ. ಕಾರ್ಮಿಕರೆಲ್ಲರೂ ಐಕ್ಯ ಹೋರಾಟಗಳನ್ನು ನಡೆಸುವ ಮೂಲಕ ಎಲ್ಲರ ಹಿತರಕ್ಷಣೆಗೆ ಅವಕಾಶಗಳು ಹೆಚ್ಚಾಗುತ್ತದೆಂಬುದು ಕಾರ್ಮಿಕರು ಅವರದ್ದೇ ಅನುಭವದಲ್ಲಿ ತಿಳಿದುಕೊಳಲು ಅನುವಾಗಿದೆ. ವಿಸ್ತರಣೆಗೊಳುತ್ತಿರುವ ಹೋರಾಟಗಳಿಗೆ ತಕ್ಕಂತೆ ಸಂಘಟನಾ ಕ್ರೋಢೀಕರಣ, ಕಾರ್ಯಕರ್ತರ ಬೆಳವಣಿಗೆ, ನಿಯೋಜನೆಯಲ್ಲಿ ಸಾಕಷ್ಟು ಇತಿಮಿತಿಗಳು, ಪ್ರಯತ್ನಗಳ ಕೊರತೆಯೂ ಎದ್ದು ಕಾಣುತ್ತದೆ; ಚಳುವಳಿಯಲ್ಲಿ ಉತ್ಸಾಹದಿಂದ ಕ್ರಿಯಾಶೀಲವಾಗಿ ನೂರಾರು ಕಾರ್ಮಿಕರು ತೊಡಗಿಸಿಕೊಳುತ್ತಿದ್ದಾರ. ಇಂತಹ ಕ್ರಿಯಾಶೀಲ ಕಾರ್ಯಕರ್ತರಲ್ಲಿ ಸಿಐಟಿಯುನ ರಾಜಕೀಯ, ಸಂಘಟನಾ ಕಣ್ಣೋಟವನ್ನು ಪೂರೈಸುವ ದಿಶೆಯಲ್ಲಿ ಮಾಡಿದ ಪ್ರಯತ್ನಗಳು ಏನೇನೂ ಸಾಲದಾಗಿದೆ. ಈ ದಿಶೆಯಲ್ಲಿ ಅಂಗನವಾಡಿ ನೌಕರರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ, ಹಮಾಲಿ ಕಾರ್ಮಿಕ ಫೆಡರೇಷನ್‌ಗಳಿಂದ ಪ್ರಯತ್ನಗಳು ಗಮನಾರ್ಹವಾಗಿ ನಡೆದಿವೆ. ಆದರೆ ಸಿಐಟಿಯು ಆಗಿ ಮಾಡಿದ ಪ್ರಯತ್ನ ಈ ವಿಷಯದಲ್ಲಿ ಬಹುತೇಕ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇದೆ. ಈ ಸಮ್ಮೇಳನವು ಸಿಐಟಿಯು ಆಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜಕೀಯ, ಸಂಘಟನಾ ಪ್ರಜ್ಞೆ ಉಂಟು ಮಾಡಿ ಉತ್ತರಿಸುವಲ್ಲಿ ಪ್ರಜ್ಞಾ ಪೂರ್ವಕ ಕ್ರಮಗಳನ್ನು ಕೈಗೊಳುವುದು ಅಗತ್ಯವಾಗಿದೆ.ಕಳೆದ ಸಿಐಟಿಯು ಅಖಿಲ ಭಾರತ ಸಮ್ಮೇಳನ ತಯಾರಿಯ ಪ್ರಕ್ರಿಯೆಯಲ್ಲಿ ಸ್ಥಳೀಯ ಸ್ವಾಗತ ಸಮಿತಿಗಳ ಮೂಲಕ ಪ್ರಾದೇಶಿಕವಾಗಿ ಸಂಘಟನಾ ಕೇಂದ್ರಗಳನ್ನು ಕಟ್ಟಲು ಪ್ರಯತ್ನಗಳು ನಂತರದಲ್ಲಿ ಸ್ಥಳೀಯ ಹೋರಾಟ ಸಮಿತಿಗಳ ರೂಪದಲ್ಲಿ ಪ್ರಾದೇಶಿಕವಾಗಿ ಕಾರ್ಮಿಕರ ಸಾಮೂಹಿಕ ಕೇಂದ್ರಗಳನ್ನು ಸಂಘಟಿಸುವ ನಿರಂತರ ಕ್ರಿಯಾಶೀಲಗೊಳಿಸಲು ತೀರ್ಮಾನಿಸಿದ್ದರೂ ವಾಸ್ತವದಲ್ಲಿ ಆಚರಣೆಯಲ್ಲಿ ಗಮನವೇ ನೀಡಿಲ್ಲವೆಂದು ಪರಿಸ್ಥಿತಿ ಇದೆ.
ಸ್ಥಳೀಯ ಹೋರಾಟ ಸಮಿತಿಗಳ ರಚನೆ ಹಾಗೂ ನಿರಂತರ ಕಾರ್ಯ ನಿರ್ವಹಣೆಯ ಸಿಐಟಿಯು ಕಾರ್ಮಿಕರ ಚಳುವಳಿಯಾಗಿ ನೆಲೆ ಪಡೆಯಲು ಬುನಾದಿಕಲ್ಲುಗಳಾಗಿ ಪಾತ್ರ ನಿರ್ವಹಿಸುವ ಶಕ್ತಿ ಹೊಂದಿದೆ.ಪ್ರಜಾಪ್ರಭುತ್ವ ಕಾರ್ಯನಿರ್ವಹಣ: ಸಿಐಟಿಯು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳು ಪ್ರಜಾಪ್ರಭುತ್ವ ರೀತಿಯಲ್ಲಿ, ಕಾಲಕಾಲಕ್ಕೆ ಸೇರಿಸಿ ಕೆಲಸ ಮಾಡುವಂತೆ ಮಾಡಲು ಸಾಧ್ಯವಾಗುತ್ತಿಲ್ಲ. ದ.ಕ., ಉಡುಪಿ ಬೆಂಗಳೂರು, ಮೈಸೂರು ಹೊರತುಪಡಿಸಿದರೂ, ಬಹುಶಃ ನಿರಂತರ ಕಾರ್ಯನಿರ್ವಹಣೆಯಲ್ಲಿ ಕೊರತೆಗಳು ಎದ್ದು ಕಾಣುತ್ತದೆ. ಬಲಿಷ್ಠವಾಗಿ ಸಿಐಟಿಯು ಸಮಿತಿಗಳಲ್ಲದೇ ಹೋರಾಟಗಳ ನಿಜವಾದ ಫಲವನ್ನು ಪಡೆಯಲು ಕಷ್ಟ ಸಾಧ್ಯ. ಸಿಐಟಿಯು ಧೋರಣೆಯ ಆಧಾರದಲ್ಲಿ ಸಂಘಟನೆ ಬಲಪಡಿಸಲು ಪೂರ್ಣವಧಿ ಕಾರ್ಯಕರ್ತರ ನಿಯೋಜನೆ, ಸಂಪನ್ಮೂಲ ಕ್ರೋಢೀಕರಣ, ಸಿಐಟಿಯು ಪ್ರತ್ಯೇಕ ಕಛೇರಿಗಳ ನಿರ್ವಹಣೆಗೆ ಮುಂದಿನ ದಿನಗಳಲ್ಲಿ ವಿಶೇಷ ಗಮನ ಅಗತ್ಯವಾಗಿದೆ.ಕೋಮುವಾದಿಗಳ ಹೆಬ್ಬಾಗಿಲು : ಬಿಜೆಪಿ ಸರ್ಕಾರ ದಕ್ಷಿಣ ಭಾರತದಲ್ಲೇ ಕರ್ನಾಟಕವನ್ನು ಹೆಬ್ಬಾಗಿಲಾಗಿ ಪರಿಗಣಿಸಿ ಅಧಿಕಾರವನ್ನು ನಡೆಸುತ್ತಿದೆ. ಕೋಮುವಾದಿ ಸಿದ್ದಾಂತದ ನೆಲೆಗಟ್ಟಿನಲ್ಲಿ, ಇಡೀ ಜನತೆಯ ಗಮನವನ್ನು ವಾಸ್ತವ ಬದುಕಿನ ಪ್ರಶ್ನೆಗಳಿಂದ ದಾರಿ ತಪ್ಪಿಸಲು ಯೋಜನಾ ಬದ್ಧ ಕೆಲಸ ನಡೆಯುತ್ತಿದೆ. ಜಾತಿ, ಧರ್ಮದ ಆಧಾರದಲ್ಲಿ ಸೈದ್ದಾಂತಿಕ ದಾಳಿ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ನಿರಂತರ ವೈಫಲ್ಯಗಳ ನಡುವೆಯೂ ಹಣದ ಬಲದಿಂದ ಹಾಗೂ ಕೋಮುವಾದಿ ಸಿದ್ಧಾಂತ ಮೂಲಕ ಅಧಿಕಾರದ ಹಿಡಿತ ಹೆಚ್ಚಿಸಿಕೊಳಲು ಪ್ರಯತ್ನಿಸುತ್ತಿದೆ. ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಕಾರ್ಮಿಕರೇ ಆಗಿದ್ದಾರೆ. ಜಾತಿ ಪ್ರಜ್ಞೆಯು ದಿನೇ ದಿನೇ ವ್ಯಾಪಕವಾಗುತ್ತಿದೆ. ಬಿಜೆಪಿ ರಾಜ್ಯ ಸರ್ಕಾದರ ಜಾತಿ ಪ್ರಶ್ನೆಯನ್ನು ಗಟ್ಟಿಗೊಳಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ ಸಮಾಜದಲ್ಲಿ ಭೇದಭಾವಗಳನ್ನು ಗಟ್ಟಿಗೊಳಿಸಲು, ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ಸೈದ್ದಾಂತಿಕ ಹೋರಾಟವನ್ನು ನಡೆಸಲು ಕಾರ್ಮಿಕರನ್ನು ಅಣಿಗೊಳಿಸಬೇಕಾಗಿದೆ. ಸಾಂಪ್ರದಾಯಿಕ ಶಕ್ತಿಗಳ ಆರ್ಭಟ, ಜಾತಿ ಪ್ರಜ್ಞೆಯ ವೈಭವೀಕರಣ, ಗೋಹತ್ಯ್ನೆ ನಿಷೇಧದಂತಹ ಕ್ರಮಗಳ ಮೂಲಕ ಜಾತಿ ಕೋಮು ಕ್ರೋಢೀಕರಣದ ಸಂದರ್ಭದಲ್ಲಿ ಕಾರ್ಮಿಕ ವರ್ಗ ನಿರಾಯುಧವಾದ ಶಕ್ತಿಯಾಗುವಂತೆ ಅಪಾಯ ಹೆಚ್ಚಾಗುತ್ತಿದೆ.ಮಾರ್ಗದರ್ಶಕ ಸಮ್ಮೇಳನ ಇಂತಹ ಸೈದ್ದಾಂತಿಕ ಧಾಳಿಗಳನ್ನು ಕಾರ್ಮಿಕರು ಸೈದ್ದಾಂತಿಕವಾಗಿ ಹಿಮ್ಮೆಟ್ಟಿಸಲು ಸನ್ನಧ್ಧವಾಗಿ ಮಾಡಲು ಮೊದಲು ಆದ್ಯತೆ ನೀಡಲು ಈ ಸಮ್ಮೇಳನ ಮಾರ್ಗದರ್ಶಕ ವಾಗಬೇಕಾಗಿದೆ. ಈ ದಿಶೆಯಲ್ಲಿ ಜೂನ್ ಅಥವಾ ಜುಲೈನಲ್ಲಿ ರಾಜ್ಯ ಮಟ್ಟದ ಸೈದ್ದಾಂತಿಕ ತರಬೇತಿ ನೀಡುವುದಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಶಿಕ್ಷಣ ಪುನರ್ ಶಿಕ್ಷಣದ ಕಡೆ ಒತ್ತು ನೀಡುವುದು ಅಗತ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಭಾಷಾ ಅಂಧಾಭಿಮಾನದ ಶಕ್ತಿಗಳು ಕಾರ್ಮಿಕರ ನಡುವೆ ಸಾಹಸವಾದಿ ಪ್ರವೃತ್ತಿಗಳ ಮೂಲಕ ಮಧ್ಯಪ್ರವೇಶವನ್ನು ಮಾಡುತ್ತಿದ್ದಾರೆ. ಈ ಮೂಲಕ ಕಾರ್ಮಿಕರ ಹೋರಾಟದ ಸತ್ವವನ್ನು ನಿಷ್ಕ್ರಿಯಗೊಳಿಸಿ,ದೀರ್ಘಕಾಲೀನ ಸಂಕುಚಿತ ಭಾಷಾವಾರು ವಿಭಜನೆ ಉಂಟು ಮಾಡಿ ಲಾಭ ಪಡೆಯಲು ಪ್ರಯತ್ನಿಸುತ್ತಿರುವುದು ಅಪಾಯಕಾರಿ ಸನ್ನಿವೇಶವಾಗಿದೆ.
ಇಂತಹ ಭಾಷಾ ಅಂಧಾಭಿಮಾನಿ ಶಕ್ತಿಗಳ ಪ್ರಭಾವದಿಂದ ಕಾರ್ಮಿಕರನ್ನು ಬಿಡುಗಡೆಗೊಳಿಸಿ ಸಾಮಾನ್ಯ ಕಾರ್ಮಿಕ ಚಳುವಳಿಯ ಪ್ರಧಾನ ಪ್ರವಾಹದಲ್ಲಿ ತೊಡಗಿಸುವಂತಹ ಕ್ರಮಗಳು ಅಗತ್ಯವಾಗಿ ಈ ಎಲ್ಲಾ ಹಿನ್ನೆಲೆಯಲ್ಲಿ `ಸೈದ್ದಾಂತಿಕ ತರಬೇತಿಯ ಕಡೆ ಗಮನ ನೀಡುವುದು ಅಗತ್ಯವಾಗಿದೆ. ಮಹಿಳಾ ಕಾರ್ಮಿಕರು ಸಿಐಟಿಯು ಹೋರಾಟಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷವಾಗಿದೆ. ಮಹಿಳಾ ಕಾರ್ಮಿಕರನ್ನು ಕಾರ್ಯಕರ್ತರಾಗಿ ನಾಯಕರಾಗಿ ಬೆಳೆಸಲು ವಿಶೇಷ ಗಮನ ನೀಡುವುದು ಸಿಐಟಿಯನ ಬಲಪಡಿಸುವ ದಿಶೆಯಲ್ಲಿ ಆದ್ಯತೆಯ ವಿಚಾರವೂ ಆಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಸಮರಧೀರ ಹೋರಾಟಗಳನ್ನು ಆಹಾರದ ಹಕ್ಕಿನ ರಕ್ಷಣೆಗಾಗಿ ನಡೆಸಲು ಇಡೀ ಸಿಐಟಿಯು ಸಜ್ಜಾಗಬೇಕಾಗಿದೆ. ಇದಕ್ಕಾಗಿ ಸಿಐಟಿಯು ಸಂಘಟನೆಯನ್ನು ಪ್ರಜಾಪ್ರಭುತ್ವ ಕಾರ್ಯನಿರ್ವಹಣೆ ಎಲ್ಲ ಹಂತಗಳಲ್ಲಿ ರಾಜ್ಯದಿಂದ ಜಿಲ್ಲಾ, ತಾಲ್ಲೂಕು, ವಾರ್ಡ್ ಗ್ರಾಮ ಮಟ್ಟವರಿಗೆ ವಿಶೇಷ ಗಮನ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ಹೋರಾಟ ಸಮಿತಿಗಳ ರಚನೆ ಹಾಗೂ ಸಂಘಟನೆಯ ರಚನೆಗೆ ಒತ್ತು ನೀಡಬೇಕಾಗಿದೆ.ಕಾರ್ಮಿಕರ ಮೇಲೆ ಕೇಂದ್ರ ರಾಜ್ಯ ಸರ್ಕಾರಗಳು ಬಂಡವಾಳಗಾರರು ಮಾಡುತ್ತಿರುವ ದಬ್ಬಾಳಿಕೆ ಶೋಷಣೆಗಳನ್ನು ಎದುರಿಸಲು ಕಾರ್ಮಿಕರನ್ನು ಸೈದ್ದಾಂತಿಕ, ರಾಜಕೀಯ, ಸಂಘಟನಾ ಹೋರಾಟಗಳ ಮೂಲಕ ಕಾರ್ಮಿಕರ ಸಂಘಟನಾ ಶಕ್ತಿಯಿಂದ ಮುನ್ನಡೆಯೋಣ.
ಸೌಜನ್ಯ: ಜನಶಕ್ತಿ