ಉಡುಪಿ, ಎ.27: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹಂದಿಜ್ವರ (ಎಚ್1ಎನ್1)ದಿಂದ ದಾವಣಗೆರೆ ಜಿಲ್ಲೆಯ ಇಬ್ಬರು ಮಹಿಳೆ ಯರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ದಾವಣಗೆರೆ ಜಿಲ್ಲೆಯವರಾದ ರೇಣುಕಾ(40) ಹಾಗೂ ನೀಲಮ್ಮ (42) ಎಂದು ಗುರುತಿಸಲಾಗಿದೆ.
ಹಂದಿಜ್ವರಕ್ಕೆ ತುತ್ತಾಗಿದ್ದ ಅವರಿಬ್ಬರು ಹಲವು ಸಮಯದಿಂದ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸ್ಥಿತಿ ಗಂಭೀರ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವಾರದ ಹಿಂದೆ ವರ್ಗಾಯಿಸಲಾಗಿತ್ತು.
ಆದರೆ ಎ.24ರಂದು ರೇಣುಕಾ ಹಾಗೂ ಎ.26ರಂದು ನೀಲಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ್ದಾರೆಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ