ಧಾರವಾಡ : ಬೆಳಗಾವಿ ವಲಯದ ಒಟ್ಟು ಒಂಬತ್ತು ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳನ್ನು ಸೋಲಿಸಿದ ಹುಬ್ಬಳ್ಳಿ ಧಾರವಾಡ ಶಿಕ್ಷಣ ಇಲಾಖೆ ವಿಭಾಗ ಮಟ್ಟದ ಪ್ರೌಢಶಾಲೆಗಳ ಬಾಲಕರ ಕ್ರಿಕೆಟ್ ತಂಡದ ಆಟಗಾರರು ಉತ್ತಮ ಆಟವನ್ನು ಆಡುವ ಮೂಲಕ 23 ವರ್ಷಗಳಿಂದ ಹೆಸರು ಮಾಡಿರುವ ಬೆಳಗಾವಿ ಜಿಲ್ಲೆಯ ತಂಡದವರನ್ನು ಸೋಲಿಸಿ ವಿಭಾಗ ಮಟ್ಟದಲ್ಲಿ ಪ್ರಥಮ ಬಾರಿಗೆ ಜಯ ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಭಾಗವಹಿಸಿದ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಮಿಂಚಿದ ವಿನಾಯಕ ಸುರೇಶ ಪಾಂಡೆ ನಾಯಕತ್ವದಲ್ಲಿ ಧಾರವಾಡ ಜಿಲ್ಲೆಯ ತಂಡ ವಿಭಾಗ ಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬ್ಯಾಟಿಂಗ್‍ನಲ್ಲಿ ಮಿಂಚಿದ ಉಪ ನಾಯಕ ಆದಿತ್ಯ ಉಮರಾಣಿ, ವಿಕೆಟ್ ಕೀಪರ್ ವಿಜಯ ಬಂಡಿ, ಆದಿತ್ಯ ಡಂಗನವರ, ಶಹಬಾಜ್ ಜಮಖಂಡಿ, ಪ್ರಭು ಕಲ್ಲೋಲಿ ಸುಜಯ್ ಕೂರವರ್ ಬೌಲಿಂಗ್ ನಲ್ಲಿ ವಿನಾಯಕ ಪಾಂಡೆ, ಶ್ರೇಯಾಂಶ ನಾಗನೂರ, ವಿಕಾಸ ಪಾಟೀಲ್, ಸಮರ್ಥ ಪಾಟೀಲ್, ಸಂಕೇತ ಶೆಟ್ಟಿ, ಫರೀಧ ಹಾವೇರಿ ಹಾಗು ಉಳಿದೆಲ್ಲ ಆಟಗಾರರು ಸೇರಿ ಎದುರಾಳಿ ತಂಡವನ್ನು ಸೋಲಿಸಿದರು.
ತಂಡದ ಮಾನೇಜರ್ ಆಗಿ ಎನ್.ಕೆ.ಠಕ್ಕರ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ಮಡಿವಾಳೇಶ ಅಗಸಿಬಾಗಿಲ ಅವರು ತಂಡಕ್ಕೆ ಸಲಹೆ ಸೂಚನೆ ನೀಡುತ್ತಾ ಸಮರ್ಥವಾಗಿ ಮುನ್ನಡೆಸಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಶಿಕ್ಷಣಾಧಿಕಾರಿ ಎಸ್. ಎಸ್. ಕೆಳದಿಮಠ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ತೊಗರಿ ಮತ್ತು ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ, ಸಮನ್ವಯಾಧಿಕಾರಿ ಶಿವಳ್ಳಿಮಠ, ಶಹರ ದೈಹಿಕ ಶಿಕ್ಷಣಧಿಕಾರಿ ಕೆ. ನಾಗರಾಜಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಹಿರೇಮಠ ಸಂಘದ ಸರ್ವ ಸದಸ್ಯರು ಹಾಗೂ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಶಿಕ್ಷಕ ವರ್ಗ ಚಾಂಪಿಯನ್ ತಂಡದ ಸಾಧನೆಯನ್ನು ಪ್ರಶಂಶಿಸಿ, ಶುಭ ಹಾರೈಸಿದ್ದಾರೆ.