ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಾಲಾ ಮಕ್ಕಳ ಸುರಕ್ಷತೆ  ಹೆಚ್ಚಿನ ಆಧ್ಯತೆ- ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಸುರಕ್ಷತೆ  ಹೆಚ್ಚಿನ ಆಧ್ಯತೆ- ಶಿಕ್ಷಣ ಸಚಿವ ಮಧು ಬಂಗಾರಪ್ಪ

Sun, 04 Aug 2024 21:57:22  Office Staff   SOnews

 

ಭಟ್ಕಳ: ಶಾಲಾ ಮಕ್ಕಳ ಸುರಕ್ಷತೆಗೆ ಆಧ್ಯತೆ: ಉ.ಕ. ಜಿಲ್ಲೆಯಲ್ಲಿ ನಿರಂತರ ಮಳೆ ಬೀಳುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿನ ಜಿಲ್ಲಾಧಿಕಾರಿಗಳು ರಜೆ ನೀಡುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಜಾ ದಿನಗಳನ್ನು ಮುಂದೆ ಯಾವ ರೀತಿಯಾಗಿ ಸರಿದೂಗಿಸಬಹುದು ಎಂಬುದರ ಕುರಿತು ಶಿಕ್ಷಣ ಇಲಾಖೆ ನಿರ್ಧರಿಸಿ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಅವರು ಭಟ್ಕಳದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಹೆದ್ದಾರಿ ಅಗಲೀಕರಣದ ಸಂದರ್ಭ ಸುರಕ್ಷತೆಯ ಕ್ರಮ ಜರುಗಿಸದೇ ಇರುವುದಿಂದ ಗುಡ್ಡ ಕುಸಿತ ದುರಂತ ಸಂಭವಿಸಿದೆ. ಭೂಕುಸಿತಕ್ಕೆ ನಿರ್ದಿಷ್ಠ ಕಾರಣ ಇರಲಿಕ್ಕಿಲ್ಲ. ಪಶ್ಚಿಮ ಘಟ್ಟದಲ್ಲಿ ಪಾರಂಪರಿಕವಾಗಿ ವಾಸಿಸುತ್ತಿರುವವರು ತಪ್ಪು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಕಸ್ತೂರಿ ರಂಗನ್ ವರದಿ ಜಾರಿಯಾಗುವುದನ್ನು ನಾನು ವಿರೋಧಿಸುತ್ತೇನೆ ಎಂದರು. ಕೇಂದ್ರ ಸರ್ಕಾರ ಜನರ ಸಹಾಯಕ್ಕ ಬರಬೇಕು.ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆ ಹರಿಸಬೇಕು. ಅರಣ್ಯ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್ ನಿರ್ಮಾಣ ಆಗಿದ್ದರೆ ಅದು ತಪ್ಪು ಈ ಕುರಿತು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಬಿಜೆಪಿ ಜೆ.ಡಿ.ಎಸ್ ಸೇರಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೇಸ್ ಕುರಿತು ಮಾತನಾಡುವಾಗ ವಿಜಯೇಂದ್ರ ರ ಅಪ್ಪ ಏಕೆ ಜೈಲಿಗೆ ಹೋಗಿದ್ದರು ಎನ್ನುವುದನ್ನು ಅವರು ಸಾರ್ವಜನಿಕರಿಗೆ ಬಹಿರಂಗ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಹಾಗೂ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ,  ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಬೀಮಣ್ಯ ನಾಯ್ಕ, ವಿ.ಆರ್.ನಾಯ್ಕ ಸಿದ್ದಾಪುರ, ಶ್ರೀನಿವಾಸ ನಾಯ್ಕ ಶಿರಸಿ, ಭಟ್ಕಳ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ವೆಂಕಟೇಶ ನಾಯ್ಕ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷÀ ಕೃಷ್ಣ ನಾಯ್ಕ, ಸಂಚಾಲಕÀ ಕೃಷ್ಣ ಪ್ರಥ್ವಿ, ವಿಠ್ಠಲ್ ನಾಯ್ಕ, ವಾಮನ ನಾಯ್ಕ ಹೊನ್ನಾವರ, ಮತ್ತಿತರರು ಉಪಸ್ಥಿತರಿದ್ದರು.

 

 

ಶಿಕ್ಷಣ ಸಚಿವರಿಗೆ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳಿಂದ ಮಂತ್ರಾಕ್ಷತೆ

ಭಟ್ಕಳ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಲ್ಲಿನ ಕರಿಕಲ್ ದ್ಯಾನ ಮಂದಿರಕ್ಕೆ ಆಗಮಿಸಿ ಚಾತುರ್ಮಾಸ್ಯ ವೃತ ಕೈಗೊಂಡಿರುವ ಧರ್ಮಸ್ಥಳ ಉಜಿರೆ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸ್ವಾಮೀಜಿಗಳು ಸಚಿವರಿಗೆ ಮಂತ್ರಾಕ್ಷತೆ ನೀಡಿ ಗೌರವಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ನಾನು ಈ ಹಿಂದೆಯೂ ಸಹ ಧರ್ಮಸ್ಥಳಕ್ಕೆ ಹೋಗಿ ಚಾತುರ್ಮಾಸ್ಯದಲ್ಲಿರುವ ಸ್ವಾಮೀಜಿಯವರ ಅಶೀರ್ವಾದ ಪಡೆದು ಬಂದಿದ್ದೇನೆ. ಈಗ ಸಚಿವನಾಗಿ ಸ್ವಮೀಜಿಗಳ ಆಶಿರ್ವಾದ ಪಡೆಯಲು ಬಂದಿದ್ದು 41 ದಿನಗಳ ಕಾಲ ಭಟ್ಕಳದ ಕರಿಕಲ್ ದ್ಯಾನ ಮಂದಿರದಲ್ಲಿ ನಡೆಯುವ ಚಾತುರ್ಮಾಸ್ಯ ಕಾರ್ಯಕ್ರಮವನ್ನು ಸ್ವಾಮೀಜಿಗಳ ಭಕ್ತರು ಅಚ್ಚುಕಟ್ಟಾಗಿ ದೊಡ್ಡ ಮಟ್ಟದಲ್ಲಿ ನಡೆಸಿದ್ದಾರೆ. ಎಲ್ಲ ಜಾತಿ ಮತದವರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ನಡೆಸುವ ಈ ಈ ಕಾರ್ಯಕ್ಕೆ ಎಲ್ಲ ಸದ್ಬಕ್ತರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಬೀಮಣ್ಯ ನಾಯ್ಕ, ವಿ.ಆರ್.ನಾಯ್ಕ ಸಿದ್ದಾಪುರ, ಶ್ರೀನಿವಾಸ ನಾಯ್ಕ ಶಿರಸಿ, ಭಟ್ಕಳ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ವೆಂಕಟೇಶ ನಾಯ್ಕ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷÀ ಕೃಷ್ಣ ನಾಯ್ಕ, ಸಂಚಾಲಕÀ ಕೃಷ್ಣ ಪ್ರಥ್ವಿ, ವಿಠ್ಠಲ್ ನಾಯ್ಕ, ವಾಮನ ನಾಯ್ಕ ಹೊನ್ನಾವರ, ಮತ್ತಿತರರು ಉಪಸ್ಥಿತರಿದ್ದರು.

 


 


Share: