ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವೃದ್ಧಾಶ್ರಮದಲ್ಲಿ ಉಚಿತ ಪ್ರವೇಶಕ್ಕೆ ಅರ್ಜಿ.

ವೃದ್ಧಾಶ್ರಮದಲ್ಲಿ ಉಚಿತ ಪ್ರವೇಶಕ್ಕೆ ಅರ್ಜಿ.

Wed, 13 Apr 2022 15:00:37  Office Staff   SO News

ಕಾರವಾರ : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಸರಕಾರದ ಅನುದಾನದಡಿ ಹಿರಿಯ ನಾಗರಿಕರಿಗಾಗಿ ವೃದ್ಧಾಶ್ರಮದಲ್ಲಿ ಉಚಿತವಾಗಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 

ಶ್ರೀ ರಾಘವೇಂದ್ರ ವೃದ್ಧಾಶ್ರಮವು ಉಚಿತ ಊಟ ವಸತಿ ನಾಗರಿಕ ಸೇವಾ ಸೌಲಭ್ಯ ಒದಗಿಸುತ್ತಿದ್ದು, ಪ್ರವೇಶ ಪಡೆಯ ಬಯಸುವವರು ಆಧಾರ ಕಾರ್ಡ್, ಛಾಯಾಚಿತ್ರ, ಮತದಾನದ ಗುರುತಿನ ಚೀಟಿ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬಿ.ಪಿ.ಎಲ್ ಪಡಿತರ ಚೀಟಿಯ ಪ್ರತಿಯೊಂದಿಗೆ  ಕೇರ್ ಆಫ್ ಆಶಿರ್ವಾದ ಬಿಲ್ಡಿಂಗ್ ನಾಯಕನಕೆರೆ  ಬಾಳಗಿನ ಮನೆ ಯಲ್ಲಾಪುರ ಉ.ಕ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬೇಕು. 
ಹೆಚ್ಚಿನ ಮಾಹಿತಿಗಾಗಿ ಎಮ್.ಎಸ್. ಖೋತ ರವರ ದೂರವಾಣಿ ಸಂಖ್ಯೆ 9740414787, 9164941175, 6364335499, 9448160642ಗೆ ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


Share: