ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಧಾನಸಭೆ ಚುನಾವಣೆಗೆ ಸಿದ್ಧತೆ:ವಿರೋಧ ಪಕ್ಷ ಕಾಂಗ್ರೆಸ್ ಹತ್ತಿಕ್ಕಲು ಬಿಜೆಪಿ ಕಾರ್ಯಕಾರಿಣಿಯಲ್ಲಿ ರಣತಂತ್ರ

ವಿಧಾನಸಭೆ ಚುನಾವಣೆಗೆ ಸಿದ್ಧತೆ:ವಿರೋಧ ಪಕ್ಷ ಕಾಂಗ್ರೆಸ್ ಹತ್ತಿಕ್ಕಲು ಬಿಜೆಪಿ ಕಾರ್ಯಕಾರಿಣಿಯಲ್ಲಿ ರಣತಂತ್ರ

Wed, 19 Oct 2022 06:05:58  Office Staff   so news

ಭಟ್ಕಳ:ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯು ಕಡವಿಕಟ್ಟೆ ಸಭಾಭವನದಲ್ಲಿ‌‌ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೆರವೇರಿಸಿದರು.
ನಂತರ ಮಾತನಾಡಿದ ಅವರು ಇಂದಿನ ಕಾರ್ಯಕಾರಿಣಿ ಸಭೆಯು ಮುಂದಿನ ದಿನಗಳಲ್ಲಿ ಪಕ್ಷವನ್ನು ಯಾವ ರೀತಿ ಸಂಘಟಿಸಿ ಮುನ್ನಡೆಸಬಹುದು ಹಾಗೂ ಮುಂಬರುವ ಚುನಾವಣೆಯನ್ನು ಹೇಗೆ ಎದುರಿಸ ಬಹುವುದು ಎಂದ ಅವರು ರಾಜಕಾರಣದ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿರುವ ನಾವು ,ನಮ್ಮ ಮುಂದೆ ಬರುವ ಇತರ ಪಕ್ಷಗಳ ಸವಾಲುಗಳನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದರ ಬಗ್ಗೆ ಬಹಳ ನಿಖರವಾದ , ಸ್ಪಷ್ಟವಾದ ನಿಲುವನ್ನು ಹೊಂದಲೂ ಈ ಕಾರ್ಯಕಾರಿಣಿ ಸಹಕಾರವಾಗುತ್ತದೆ ಎಂದು ನಾನು ಬಾವಿಸಿದ್ದೇನೆ ಎಂದರು . 

ಕಾಂಗ್ರೆಸ್ ಮಾಡುತ್ತಿರುವುದು ಭಾರತ ಜೋಡೋ ಎಂದು ಹೇಳುತ್ತಿದೆ. ಆದರೆ ಇತಿಹಾಸದುದ್ದಕ್ಕೂ ಕಾಂಗ್ರೆಸ್ ಭಾರತ್ ತೋಡುವನ್ನೇ ಮಾಡಿದೆ ಕಾಶ್ಮೀರದಲ್ಲಿ ತಾಯಿ ಎದೆ ಹಾಲು ಕುಡಿದರೆ ಭಾರತದ ಧ್ವಜ ಹಾರಿಸಿ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಆತಂಕವಾದಿಗಳು ಸವಾಲಿಸಿದರೆ ಆಗಿನ ಕಾಂಗ್ರೆಸ್ ಸರ್ಕಾರ ಅದಕ್ಕೆ ಪ್ರತ್ಯುತ್ತರ ಕೊಡದೆ ಅವರಿಗೆ ರಾಜಮರ್ಯಾದೆ ಕೊಡುತ್ತಿತ್ತು ಆದರೆ ಬಿಜೆಪಿ ಸರ್ಕಾರ ಬಂದ ನಂತರ ಕಾಶ್ಮೀರದಲ್ಲಿ ಪ್ರತಿಸರ್ಕಾರಿ ಕಟ್ಟಡದ ಮೇಲು ಭಾರತ್ ಧ್ವಜ ಹಾರುವಂಥ ಆಗಿದೆ ಇದು ನಿಜವಾದ ಭಾರತ್ ಜೋಡೋ ಕಾರ್ಯಕ್ರಮವಾಗಿದೆ ಕಾಂಗ್ರೆಸ್ ಸ್ವತಂತ್ರದ ನಂತರ ಕಾಶ್ಮೀರದಲ್ಲಿ ಮಾಡದ್ದು ಭಾರತ್ತೋಡೊ ಕಾರ್ಯಕ್ರಮವಾಗಿದೆ ಎಂದರು. 

ಕಾರ್ಯಕಾರಿಣಿ ಸಭೆನ್ನೋದು ಪಕ್ಷದ ಪ್ರಗತಿ ಪರಿಶೀಲನೆಯ ಸಭೆಯಾಗಿದೆ ಇಲ್ಲಿ ನಾವು ಮಾಡಿರುವ ತಪ್ಪುಗಳು ಮುಂದೆ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ನಾವು ಚರ್ಚಿಸಬೇಕು ಇದರ ಮೂಲಕ ನಮ್ಮ ಪಕ್ಷ ಪ್ರಬಲ ವಾಗುವಂತೆ ನಾವು ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು
ಮೀಸಲಾತಿ ಹೆಚ್ಚಳವನ್ನು ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಲಾಭದಾಯಕವಾಗಲಿದೆ ನಮ್ಮ ಸರ್ಕಾರ ಯಾರಿಗೂ ತುಷ್ಟಿಗುಣ ಮಾಡುವುದಿಲ್ಲ ನ್ಯಾಯವನ್ನು ಒದಗಿಸುತ್ತದೆ ಆದರೆ ಕಾಂಗ್ರೆಸ್ ಸರ್ಕಾರ ಪ್ರಚಾರವನ್ನು ಮಾತ್ರ ಬಯಸುತ್ತದೆ
ನಾಮಧಾರಿ ಸಮಾಜಕ್ಕೆ ಪ್ರತ್ಯೇಕ ನಿಗಮ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೊಂಡಿದ್ದು ಒಂದೊಮ್ಮೆ ಅದು ಸಾಧ್ಯವಾಗದೇ ಹೋದಲ್ಲಿ ನಾಮಧಾರಿ ಸಮಾಜದವರು ಇರುವ ಸ್ಥಳಗಳಲ್ಲಿ ನಾರಾಯಣಗುರು ವಸತಿ ಶಾಲೆಯನ್ನಾದರೂ ಒದಗಿಸಿ ಕೊಡಿ ಎಂದು ಮುಖ್ಯಮಂತ್ರಿ ಅವರಿಗೆ ಕೋರಿದ್ದಾಗಿ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ರವರು ಮಾತನಾಡಿ ಬಿಜೆಪಿ ಪಕ್ಷದಲ್ಲಿ ವಂಶ ಪಾರಂಪರ್ಯ ಪದ್ಧತಿ ಇಲ್ಲ ಯಾರಿಗೂ ಕೂಡ ನಾವು ತುಷ್ಟಿಗುಣ ಮಾಡುವುದಿಲ್ಲ ನಾವು ಅಧಿಕಾರದಲ್ಲಿ ಇರಲಿ ಅಥವಾ ಅಧಿಕಾರದಲ್ಲಿ ಇಲ್ಲದೆ ಇರಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಜನರಿಗೆ ತೊಂದರೆ ಆದರೆ ನಾವು ಸರ್ಕಾರ ವಿರುದ್ಧ ಹೋರಾಡಲು ಮುಂಚೂಣಿಯಲ್ಲಿರುತ್ತೇವೆ.
ಬಿಜೆಪಿ ಪಕ್ಷವನ್ನ ಜನರು ಬೇರೆ ಪಕ್ಷಕ್ಕಿಂತ ವಿಭಿನ್ನವಾಗಿ ನೋಡುತ್ತಾರೆ. ಜನಸಂಘದ ಕಾಲದಿಂದಲೂ ಬಿಜೆಪಿ ಪಕ್ಷ ಇದೇ ರೀತಿ ಜನಾನುರಾಗಿಯಾಗಿ  ಕಾರ್ಯನಿರ್ವಹಿಸುತ್ತಿದೆ.ನಮ್ಮ ಕಾರ್ಯಕರ್ತರು ಕೇವಲ ಚುನಾವಣೆಯಲ್ಲಿ ಮಾತ್ರ ಒಟ್ಟಾಗುವುದಿಲ್ಲ ಚುನಾವಣೆ ಇಲ್ಲದ ಸಂದರ್ಭದಲ್ಲಿ ಕೂಡ ನಾವು ಒಟ್ಟಾಗಿ ಪಕ್ಷ ಸಂಘಟನೆಯ ಕಾರ್ಯವನ್ನು ಮಾಡುತ್ತೇವೆ ಇದನ್ನು ಈಗಲೂ ಸಹ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಅವಶ್ಯಕತೆ ಇದೆ ಎಂದರು
ಕಾರ್ಯಕಾರಣಿ ಸಭೆಯಲ್ಲಿ ದೇಶ ವಿರೋಧಿ ಸಂಘಟನೆಗಳಿಗೆ ಲಗಾಮು ಹಾಕಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ವಿಶೇಷ ಮೀಸಲಾತಿ ಒದಗಿರಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. 
ಈ ಸಂದರ್ಭದಲ್ಲಿ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ,ಕಾರವಾರ ಮತ್ತು ಅಂಕೋಲ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ , ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು


Share: