ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿದ್ಯುತ್ ಅವಘಡದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದ ಸಚಿವ ಬಿ.ನಾಗೇಂದ್ರ

ವಿದ್ಯುತ್ ಅವಘಡದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದ ಸಚಿವ ಬಿ.ನಾಗೇಂದ್ರ

Tue, 06 Jun 2023 19:10:30  Office Staff   SO News

ಬಳ್ಳಾರಿ : ನಗರದ ಕೌಲ್ ಬಜಾರ್ ವ್ಯಾಪ್ತಿಯ ಬಂಡಿಹಟ್ಟಿಯಲ್ಲಿ ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದ ಕಲಾವಿದ ಪಂಪಾಪತಿ(7೦) ಹಾಗೂ ದ್ಯಾವಮ್ಮ(6೦) ಅವರ ಕುಟುಂಬಕ್ಕೆ ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ  ಬಿ.ನಾಗೇಂದ್ರ ಪರಿಹಾರದ ಚೆಕ್ ವಿತರಿಸಿದರು.

ಸೋಮವಾರ ಭೇಟಿ ನೀಡಿ, ತಲಾ 5 ಲಕ್ಷದಂತೆ ಹತ್ತು ಲಕ್ಷ ಮೊತ್ತದ ಚೆಕ್ ನ್ನು ಕುಟುಂಬಸ್ಥರಿಗೆ ವಿತರಿಸಿ ಸಾಂತ್ವನ ಹೇಳಿದರು.

  ಈ ಸಂದರ್ಭದಲ್ಲಿ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಅಸೀಫ್, ಮುಖಂಡರಾದ ಮುಂಡ್ರಗಿ ನಾಗರಾಜ್, ಉಮಾಪತಿ ಹಾಗೂ ಇತರರು ಹಾಜರಿದ್ದರು.


Share: