ಭಟ್ಕಳ: ಸರಕಾರಿ ಪದವಿ ಪೂರ್ವ ಕಾಲೇಜು ಹಡೀನ ಭಟ್ಕಳ ಇದರ ವಾಷಿ೯ಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾಯ೯ಕ್ರಮವನ್ನು ಶಾಸಕ ಸುನೀಲ ಬಿ. ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಹೆಚ್ಚು ಜ್ಞಾನ ಹೊಂದಲು ಕಾಲೇಜು ಶಿಕ್ಷಣ ಬಹಳ ಉಪಯುಕ್ತವಾದುದು. ಸರಕಾರ ವಿದ್ಯಾರ್ಥಿಗಳಿಗಾಗಿ ವಿವಿಧ ಸೌಲಭ್ಯಗಳನ್ನು ವದಗಿಸುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಪದವಿ ಪೂರ್ವ ಕಾಲೇಜಿನಲ್ಲಿ ಕಲಿಕಾ ಕೊಠಡಿಗಳ ಹಾಗೂ ಇತರ ಮೂಲಭೂತ ಸೌಕರ್ಯಗಳ ಕೊರತೆ ಅರಿತಿದ್ದು ಅತೀ ಶೀಘ್ರದಲ್ಲಿ ಅಗತ್ಯದ ಕೋಣೆಗಳನ್ನು ಮಂಜೂರಿ ಮಾಡಿಸಿಕೊಂಡು ಬಂದು ೨೦ ದಿನಗಳಲ್ಲಿ ನಾನೇ ಅಡಿಗಲ್ಲು ಹಾಕುತ್ತೇನೆ ಎನ್ನುವ ಭರವಸೆಯನ್ನು ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರ ಸಮ್ಮುಖದಲ್ಲಿ ನೀಡಿದ ಅವರು ಶಿಕ್ಷಣಕ್ಕೆ ತನ್ನ ಮೊದಲ ಆದ್ಯತೆ ಎಂದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಗಜಾನನ ನಾಯ್ಕ ಕಾಲೇಜಿನ ಅಭಿವೃದ್ಧಿ ಮತ್ತು ಶಿಕ್ಷಣದ ಅಭಿವೃದ್ಧಿಗೆ ಎಲ್ಲರ ಸಹಕಾರ ಇದ್ದಾಗ ಕಾಲೇಜು ಅಭಿವೃದ್ಧಿ ಯಾಗಲು ಸಾಧ್ಯ ಈ ದಿಸೆಯಲ್ಲಿ ಮೂಲಭೂತ ಸೌಕರ್ಯಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಯಲ್ವಡಿಕವೂರ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ನಾಯ್ಕ. ಉಪಾಧ್ಯಕ್ಷೆ ಕಾವ್ಯ ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಎಚ್.ನಾಯ್ಕ ಕರಾವಳಿ, ವೆಂಕಟೇಶ್ವರ ವಿದ್ಯಾ ವಧ೯ಕ ಸಂಘದ ಅಧ್ಯಕ್ಷ ಕೆ.ಆರ್. ನಾಯ್ಕ, ಅಂಕೋಲಾದ ನಿವೃತ್ತ ಉಪನ್ಯಾಸಕ ಎಂ.ಆರ್.ನಾಯ್ಕ. ಹೆಸ್ಕಾಂ ಸಹಾಯಕ ಅಭಿಯಂತರ ಶಿವಾನಂದ ನಾಯ್ಕ, ತಾ.ಪಂ. ಮಾಜಿ ಸದಸ್ಯ ಹನುಮಂತ ನಾಯ್ಕ, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಮೋಹನ್ ನಾಯ್ಕ, ವಾಸು ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಶ್ರೀಧರ ನಾಯ್ಕ ಭಟ್ಕಳ ಮಾತನಾಡಿದರು.
ಸಮಾರಂಭದಲ್ಲಿ ಕುಮಾರಿ ವೇದ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕ ಎಂ.ಕೆ.ನಾಯ್ಕ ಸ್ವಾಗತಿಸಿದರು. ಯೋಗೇಶ್ ಪಟಗಾರ ವರದಿ ವಾಚಿಸಿದರು, ರಂಗ ಪಟಗಾರ ಮತ್ತು ಸಂಗಡಿಗರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು, ರಾಜೇಶ್ ನಾಯ್ಕ ವಂದಿಸಿದರು, ಮಂಜುನಾಥ ನಾಯ್ಕ ಕಾಯ೯ಕ್ರಮ ನಿರೂಪಿಸಿದರು.