ಭಟ್ಕಳ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಂ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಷಡ್ಯಂತ್ರಗಳು ನಡೆಯುತ್ತಿದ್ದು, ಕೋಮುವಾದ, ಇಸ್ಲಾಮೋಫೋಬಿಂiÀi, ಲವ್‌ಜಿಹಾದ್, ಭಯೋತ್ಪಾದನೆ, ಹಿಜಾಬ್ ಮತ್ತಿತರ ವಿವಾದಗಳನ್ನು ಹುಟ್ಟುಹಾಕಲಾಗಿದ್ದು ಇದೊಂದು ರಾಜಕೀಯ ಪ್ರೇರಿತ ಬೆಳವಣೆಗೆಯಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞÂ ಹೇಳಿದರು.
ಅವರು ಗುರುವಾರ ಇಲ್ಲಿನ ಹೊಟೇಲ್ ರಾಯಲ್ ಓಕ್ ನಲ್ಲಿ ಜರಗಿದ “ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ದೇಶದಾದ್ಯಂತ ನಡೆಯುವ ಬಾಂಬು ಸ್ಪೋಟಗಳಿಗೆ ಒಂದು ಧರ್ಮವನ್ನು ತಳಕು ಹಾಕಲಾಗುತ್ತಿದ್ದು ನಿರಾಪರಾಧಿಗಳು ೧೫-೨೦ ವರ್ಷ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಬಾಂಬು ಪ್ರಕರಣದ ಆರೋಪಿಗಳು ಸಂಸದರಾಗಿ ಮೆರೆಯುತ್ತಿದ್ದಾರೆ. ಈ ದೇಶದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಬಾಂಬುಸ್ಫೋಟಗಳು ನಡೆದಿದೆ. ಇವತ್ತಿನ ವರೆಗೂ ನಿಜವಾದ ಅಪರಾಧಿಗಳು ಯಾರು ಎಂಬುದು ಕಂಡು ಹಿಡಿಯಲು ನಮ್ಮ ತನಿಖೆ ಸಂಸ್ಥೆಗಳು ವಿಫಲಗೊಂಡಿವೆ. ಸ್ಪೋಟಗಳು ನಡೆದಾಗಿ ಮುಸ್ಲಿಮರು ಖಂಡಿಸಿದ್ದಾರೆ ಮತ್ತು ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ. ಅಪರಾಧಿಗಳಿಗೆ ಧರ್ಮದ ನಂಟು ಹಚ್ಚುವುದು ಸರಿಯಲ್ಲ, ಇಲ್ಲಿ ಹಿಂದುಗಳ ಹತ್ಯೆಗಳು ನಡೆದಿವೆ ಮುಸ್ಲಿಮರು ಹತ್ಯೆಯಾಗಿದ್ದಾರೆ. ಹಾಗಾಂತ ಹಂತಕರಿಗೆ ಧರ್ಮದ ಲೇಪ ಹಚ್ಚುವುದು ಸರಿಯಲ್ಲ ಎಂದರು.
ಇಸ್ಲಾಮ್ ಧರ್ಮದಲ್ಲಿ ಮದುವೆಗೂ ಮುಂಚ್ ಪ್ರೀತಿ, ಪ್ರಣಯ, ಲವ್ ಎಂಬುದಾಗಿ ಇಲ್ಲ ಒಂದು ವೇಳೆ ಹಾಗೆ ಮಾಡಿದರೆ ಅದು ವ್ಯಭಿಚಾರ ಅನ್ನಿಸಿಕೊಳ್ಳುತ್ತದೆ. ಲವ್ ಜಿಹಾದ್ ಅನ್ನುವುದು ರಾಜಕಾರಣಕ್ಕಾಗಿ ಸೃಷ್ಟಿಯಾಗಿದೆ ಹೊರತು ಧರ್ಮಕಾರಣಕ್ಕಾಗಿ ಅಲ್ಲ ಎಂದರು. ಇಸ್ಲಾಮ್ ವ್ಯಭಿಚಾರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳುತ್ತದೆ. ಲವ್ ಮಾಡಿ ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಲು ಯಾವುದೇ ಅವಕಾಶ ಇಲ್ಲ ಎಂದ ಅವರು, ಈ ಕುರಿತು ಅಧಿಕೃತವಾಗಿ ಸರ್ಕಾರವಾಗಲಿ ತನಿಖಾ ಸಂಸ್ಥೆಗಳಾಗಿ ಎಲ್ಲೋ ಹೇಳಿಕೊಂಡಿಲ್ಲ ಎಂದರು. ದೇಶದಲ್ಲಿ ಲವ್ ಜಿಹಾದ್ ನಡೆಯುತ್ತಿಲ್ಲ ಎಂದು ಪಾರ್ಲಿಮೆಂಟ್ ಹೇಳಿದ್ದು ಆದರೂ ಕೂಡ ರಾಜಕೀಯಕ್ಕಾಗಿ ಲವ್ ಜಿಹಾದ್ ಚರ್ಚೆ ನಡೆಯುತ್ತಿದೆ ಎಂದರು.
ಎಷ್ಟೋ ಮುಸ್ಲಿಮ್ ಹೆಣ್ಣುಮಕ್ಕಳನ್ನು ಪ್ರೀತಿ ಮಾಡಿ ಮದುವೆ ಮಾಡಿಕೊಂಡ ಹಿಂದೂಗಳು ಇದ್ದಾರೆ. ಹಾಗೆ ಹಿಂದೂ ಯುವತಿಯರನ್ನು ಮುಸ್ಲಿಮ ಯುವಕರು ಮದುವೆ ಮಾಡಿಕೊಂಡಿದ್ದಾರೆ. ಎಲ್ಲಿಯೂ ಮುಸ್ಲಿಮರು ಹಿಂದೂ ಜಿಹಾದ್ ಎಂಬು ಬೊಬ್ಬೆ ಹೊಡೆಯಲಿಲ್ಲ ಎಂದು ಹೇಳಿದರು. ಫತ್ವಾ ಕುರಿತಂತೆ ಮಾತನಾಡಿದ ಅವರು ಯಾರೋ ಒಬ್ಬ ವ್ಯಕ್ತಿಯ ಅಭಿಪ್ರಾಯಕ್ಕೆ ಫತ್ವ ಎಂದು ಹೇಳಲಿಕ್ಕಾಗದು ಅದು ಅವರ ವ್ಯಯಕ್ತಿಕ ಅಭಿಪ್ರಯಾ ಅಷ್ಟೇ. ಅದನ್ನು ಧರ್ಮದ ಆದೇಶ ಎಂದು ಹೇಳಲಾಗದು ಎಂದರು. ಹಿಜಾಬ್ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಹಿಜಾಬ್ ವಿಚಾರದಲ್ಲಿ ವಿವಾದ ಉಂಟು ಮಾಡಿದ್ದರಲ್ಲಿ ಮುಸ್ಲಿಮರದ್ದೂ ದೊಡ್ಡ ತಪ್ಪಿದೆ. ಹಿಜಾಬ್ ಮುಸ್ಲಿಮ ಯುವತಿಯರಷ್ಟೇ ಅಲ್ಲದೆ ಇತರ ಧರ್ಮದ ಹೆಣ್ಣುಮಕ್ಕಳು ಧರಿಸುತ್ತಾರೆ. ಹೈಕೋರ್ಟ ಅಭಿಪ್ರಾಯ ಬಂದಾಗ ಸಹಜವಾಗಿ ಮುಸ್ಲಿಮರಿಗೆ ನೋವು ಆಗಿದೆ. ಅದನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಬಾಬರಿ ಮಸೀದಿ ದ್ವಂಸವಾದಗಲೂ ಕೂಡ ನಮಗೆ ನೋವು ಆಗಿತ್ತು. ಆದರೆ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಎಲ್ಲೋ ಪ್ರತಿಭಟನೆಗಳು ನಡೆದಿಲ್ಲ. ಹಿಜಾಬ್ ವಿಷಯದಲ್ಲೋ ಮುಸ್ಲಿಮರು ನ್ಯಾಯಾಲಯದ ತೀರ್ಪು ಗೌರವಿಸುತ್ತಾರೆ ಎಂದರು. ಅಪರಾಧಗಳು ಸಮಾಜದಲ್ಲಿ ಖಂಡಿತ ನಡೆಯುತ್ತವೆ. ಹರ್ಷನ ಕೊಲೆಯಾದಾಗ ಇಸ್ಲಾಂ ಮತ್ತು ಅದರ ಧರ್ಮಗ್ರಂಥ ಕಾರಣ ಎಂದು ಶಾಸಕರೇ ಹೇಳೀದರು. ಅದರಾಚೆ ರಾಜ್ಯದಲ್ಲಿ ಹಲವು ಮುಸ್ಲಿಮರ ಕೊಲೆಗಳಾದವು ಆದರೆ ಎಲ್ಲಿಯೂ ಕೂಡ ಇದಕ್ಕೆ ಧರ್ಮ ಮತ್ತು ಧರ್ಮಗ್ರಂಥ ಕಾರಣ ಎಂದು ಹೇಳಿಲ್ಲ. ಸಮಾಜದಲ್ಲಿ ನಡೆಯುವ ಒಂದು ಕೆಟ್ಟ ಕೃತ್ಯಕ್ಕೆ ಆ ಧರ್ಮದ ಲೇಪನ್ನು ಲೇಪಿಸುವುದು ಸರಿಯಲ್ಲ ಎಂದರು. ಇರಾಕಿನಲ್ಲಿ ಬಾಂಬು ಹಾಕಿ ೧೦ಲಕ್ಷ ಜನರನ್ನು ಕೊಲೆ ಮಾಡಿದ ಜಾರ್ಜ್ ಬುಷ್ ನಿಗೂ ಒಂದು ಧರ್ಮ ಇದೆ. ಆ ವ್ಯಕ್ತಿಯ ಧರ್ಮವನ್ನು ಭಯೋತ್ಪಾದಕ ಧರ್ಮ ಎಂದು ಜಗತ್ತಿನಲ್ಲಿ ಎಲ್ಲಿಯೂ ಹೇಳಿಲ್ಲ. ಇಸ್ಲಾಮ್ ನ ಕುರಿತು ಹಲವು ತಪ್ಪು ಕಲ್ಪನೆಗಳಿವೆ ಅದು ಕೊನೆಗೊಳ್ಳಬೇಕು. ಜಗತ್ತಿನಲ್ಲಿಂದು ಆಯುಧಗಳ ವ್ಯಾಪರ ನಡೆಯುತ್ತಿದೆ. ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ, ಒಂದು ದೇಶವನ್ನು ಮತ್ತೊಂದು ದೇಶದ ವಿರುದ್ಧ ಎತ್ತಿಕಟ್ಟುವುದರ ಮೂಲಕ ಆಯುಧಗಳ ವ್ಯಾಪಾರ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ಟ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ, ಜಿಲ್ಲಾ ಸಂಚಾಲಕ ಮುಹಮ್ಮದ್ ತಲ್ಹಾ ಸಿದ್ದಿಬಾಪ, ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.