ಕಾರವಾರ: ಸ್ವಚ್ಛ ಅಮೃತ ಮಹೋತ್ಸವ 2022, ಅಂತರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯಪಾಲರ, ಉಸ್ತುವಾರಿ ಸಚಿವರ, ಶಾಸಕರ ಹಾಗೂ ವಿವಿದ ಸಂಘಸಂಸ್ಥೆಗಳ ಉಪಸ್ಥಿತಿಯಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯವರ ಸಹಯೋಗದೊಂದಿಗೆ ರೋಟರಿ ಕ್ಲಬ್ ಆಫ್ ಕಾರವಾರದ ಅಧ್ಯಕ್ಷರು ಮತ್ತು ಸದಸ್ಯರು ಟ್ಯಾಗೋರ ಕಡಲತೀರದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಕಡಲ ತೀರದಲ್ಲಿ ಬಿದ್ದಿರುವ ಕಸ-ಕಡ್ಡಿಗಳನ್ನು ಸಂಗ್ರಹಿಸಿ ನಗರಸಭೆಯ ವಾಹನಗಳಿಗೆ ನೀಡಿದರು.
ಈ ಕಾರ್ಯಕ್ರಮಕ್ಕಾಗಿ ರೋಟರಿ ಸಂಸ್ಥೆಯಿಂದ 100 ಟೀ-ಶರ್ಟ ಹಾಗೂ 100 ಕ್ಯಾಪ್ ಗಳನ್ನು ನಗರಸಭೆಗೆ ಪೂರೈಸಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ರೋ. ರಾಘವೇಂದ್ರ ಜಿ. ಪ್ರಭು, ಕಾರ್ಯದರ್ಶಿ ರೋ. ಗುರುದತ್ತ ಬಂಟ, ಸದಸ್ಯರು ರೋ. ಕೆ.ಡಿ.ಪೆಡ್ನೇಕರ, ರೋ. ಮನೋಹರ ಕಾಂಬ್ಳಿ, ರೋ. ಕ್ರಿಷ್ಣಾನಂದ ಬಾಂದೇಕರ, ರೋ. ಪಿ.ಆರ್.ನಾಯ್ಕ, ರೋ. ಅಮರನಾಥ ಶೇಟ್ಟಿ, ರೋ. ರಾಜೇಶ ವೆರ್ಣೇಕರ, ರೋ. ನಾಗರಾಜ ಜೋಶಿ, ರೋ. ಸುನೀಲ ಸೋನಿ, ರೋ. ಡಾ. ಸಮೀರಕಕುಮಾರ ನಾಯಕ, ರೋ. ಗುರು ಹೆಗಡೆ, ರೋ. ಅರ್ಚನಾ ಶೆಟ್ಟಿ, ರೋ.ಅಶ್ವಿನ ವೆರ್ಣೇಕರ, ರೋ. ಸಾತಪ್ಪಾ ತಾಂಡೇಲ, ರೋ.ಕೃಷ್ಣಾ ಕೇಳಸ್ಕರ, ರೋ. ಗುರುರಾಜ ಭಟ್, ರೋ. ಯೋಗೇಶ ಭಂಡಾರಕರ, ರೋ. ಗಣೇಶ ಪೈ ಉಪಸ್ಥಿತರಿದ್ದರು.