ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರೈಲ್ವೆ ಟ್ರ‍್ಯಾಕ್ ದಾಟುತ್ತಿರು ವೇಳೆ ಮಹಿಳೆಗೆ ರೈಲು ಬಡಿದು ದಾರುಣಾವಾಗಿ ಸಾವು

ರೈಲ್ವೆ ಟ್ರ‍್ಯಾಕ್ ದಾಟುತ್ತಿರು ವೇಳೆ ಮಹಿಳೆಗೆ ರೈಲು ಬಡಿದು ದಾರುಣಾವಾಗಿ ಸಾವು

Wed, 18 Jan 2023 06:43:03  Office Staff   so news

ಭಟ್ಕಳ: ಗದ್ದೆ ಕೆಲಸವನ್ನು ಮುಗಿಸಿಕೊಂಡು ದನದ ಹಾಲು ಕೊಡಲು ಬರುವ ವೇಳೆ ಕೊಂಕಣ ರೈಲ್ವೆ ಟ್ರ‍್ಯಾಕ್ ದಾಟುತ್ತಿರು ವೇಳೆ ಮಹಿಳೆಗೆ ರೈಲು ಬಡಿದು ದಾರುಣಾವಾಗಿ ಸಾವನ್ನಪ್ಪಿದ 
ಘಟನೆ ತಾಲ್ಲೂಕಿನ ಯಲ್ವಡಿಕವೂರ ನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಈರಮ್ಮಾ ಮಂಜಯ್ಯಾ ನಾಯ್ಕ ೬೫ ವರ್ಷ ಯಲ್ವಡಿಕವೂರ ನಿವಾಸಿ ಎಂದು ತಿಳಿದು ಬಂದಿದೆ. ಸಾಗುವ ಯಾವುದೋ ಒಂದು ರೈಲ್ವೆ ಡಿಕ್ಕಿ ಹೊಡೆದ ರಭಸಕ್ಕೆ ಸಿಡಿದ್ದು,ಬಿದ್ದು ಭುಜಕ್ಕೆ,ಕಾಲಗೆ ಮತ್ತು ಕೈಗಳಿಗೆ ತೀವ್ರ ಪೆಟ್ಟಾಗಿ  ಸ್ಥಳದಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಈ ಬಗ್ಗೆ ಮೃತ ಮಹಿಳಯ ಮಗ ಚಿಕ್ಕಯ್ಯಾ ನಾಯ್ಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ 
ದೂರನ್ನು ದಾಖಲಿಸಿ ಕೊಂಡ ಪಿ.ಎಸ್.ಐ ಭರತಕುಮಾರ ತನಿಖೆ ಕೈಗೊಂಡಿದ್ದಾರೆ.


Share: