ಬಂಟ್ವಾಳ ; ತಾಲೂಕಿನ ಕುಮ್ಡೇಲುವಿನಲ್ಲಿ ಮಹಾರಾಜ ಸ್ವಾಗತ ಗೋಪುರ ನಿರ್ಮಾಣ ಸಮಿತಿ ವತಿಯಿಂದ ಸುಮಾರು ೧೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಮಹಾರಾಜ ಸ್ವಾಗತ ಗೋಪುರದ ಸಮರ್ಪಣಾ ಮಹೋತ್ಸವವು ಮಾಚ್ ೧೮ ರಂದು ನಡೆಯಲಿದೆ. ಸೋಮವಾರ ಸಂಜೆ ಬಿಸಿ ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಸಮಿತಿ ಕಾರ್ಯಧ್ಯಕ್ಷ ಪ್ರಕಾಶ್ ಚಂದ್ರ ದೇವಸ್ಯ ರವರು, ಸುಮಾರು ೩೦ ಅಡಿ ಅಗಲ ಹಾಗೂ ೫೦ ಅಡಿ ಎತ್ತರದ ಈ ದ್ವಾರವನ್ನು ನಿರ್ಮಿಸಬೇಕೆನ್ನುವ ಕನಸು ಹಲವು ದಾನಿಗಳ ಹಾಗೂ ಊರವರ ನೆರವಿನಿಂದ ಸಾಕಾರಗೊಂಡಿದೆ ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಯವರ ಉಪಸ್ಥಿತಿಯಲಿ ಕಾರ್ಯಕ್ರಮ ನಡೆಯಲಿದ್ದು, ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಉಳಿಪಾಡಿಗುತ್ತು ತಾರಾನಾಥ ಆಳ್ವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ತಾರಾನಾಥ ಕೊಟ್ಟಾರಿ ತಿಳಿಸಿದರು. ತ್ರಿಕಾ ಗೋಷ್ಠಿಯಲ್ಲಿ ಸಮಿತಿ ಕೋಶಾಧಿಕಾರಿ ಉಮೇಶ್ ಶೆಟ್ಟಿ ಬರ್ಕೆ, ಸಂತೋಷ್ ಗಾಂಭೀರ್ ಸುಜೀರು ಗುತ್ತು ಹಾಗೂ ಸಲಹೆಗಾರ ಮಂಜು ವಿಟ್ಲ ಉಪಸ್ಥಿತರಿದ್ದರು