ಕಾರವಾರ : ರೆಡ್ ಕ್ರಾಸ್ ಜಿಲ್ಲಾ ಕಾರ್ಯಾಲಯದಲ್ಲಿ ಕೋವಿಡ್‍ನಿಂದ ನೊಂದ ಕುಟುಂಬದವರ ಜೀವನದ ನಿರ್ವಹಣೆಗಾಗಿ ಯಾಂತ್ರಿಕ ಸಿಂಗರ್ ಮೆರಿಟ್ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಸ್ವಾಗತಿಸಿದ ಪ್ರಧಾನ ಕಾರ್ಯದರ್ಶಿ ಜಗದೀಶ ಬಿರ್ಕೋಡಿಕರ ಮಾತನಾಡಿ, ಜೀವನ ನಿರ್ವಹಣೆಗಾಗಿ ನಾವು ನೀಡಿರುವ ಅಲ್ಪ ಕಾಣಿಕೆ ನೊಂದವರ ಜೀವನ ನಿರ್ವಹಣೆಗೆ ಉಪಯೋಗವಾಗಲಿ ಎಂದು ಹಾರೈಸಿದರು.
ರೆಡ್ ಕ್ರಾಸ್ ಚೇರ್ಮನ್ ಆದ ವಿ ಎಂ ಹೆಗಡೆ ಅವರು ಯಂತ್ರಗಳನ್ನು ನೀಡಿರುವ ರಾಜ್ಯ ಘಟಕಕ್ಕೆ ಧನ್ಯವಾದಗಳನ್ನು ಹೇಳುತ್ತಾ ಸಿಂಗರ್ ಮೆರಿಟ್ ಕಂಪನಿ ವತಿಯಿಂದ ನೀಡಲಾದ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಹೊಲಿಗೆ ಯಂತ್ರ ಬಳಕೆಗೆ ತರಬೇತಿ ನೀಡಲು ಕಂಪನಿಯ ತರಬೇತುದಾರರು ಆಯಾ ಫಲಾನುಭವಿಗಳ ಜಾಗಕ್ಕೆ ಭೇಟಿ ನೀಡಿ ಮೋಟರ್ರೈಸಡ್ ಯಂತ್ರದ ಬಳಕೆಯ ಕುರಿತಾಗಿ ತಿಳಿಸಲಿದ್ದಾರೆ ಎಂದು ಹೇಳಿದರು.
ಹೊಲಿಗೆ ಯಂತ್ರವನ್ನು ಅತ್ಯುತ್ತಮವಾಗಿ ತಮ್ಮ ಜೀವನ ನಿರ್ವಹಣೆಗೆ ಉಪಯೋಗಿಸಿಕೊಳ್ಳಿರಿ ಎಂದು ಕರೆ ನೀಡಿದರು. ಮುಂದೆಯೂ ಕೂಡ ಹೊಲಿಗೆ ಯಂತ್ರಗಳು ಬರಲಿದ್ದು ಅರ್ಹರು ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯ ಸದಾನಂದ ನಾಯ್ಕ ಯುವ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಸಚ್ಚಿದಾನಂದ ನಾಯ್ಕ, ವಿಪತ್ತು ನಿರ್ವಹಣ ಘಟಕದ ಅಧ್ಯಕ್ಷ ಮಾಧವ ನಾಯ್ಕ, ಕೋಶಾಧ್ಯಕ್ಷ ರಾಮ ನಾಯ್ಕ, ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಡಾ.ಹೇಮಗಿರಿ, ಆರ್ ಎಸ್ ನಾಯ್ಕ, ಶ್ರೀಕೃಷ್ಣ ಕಾಮತ್, ಸಂದೀಪ್ ರೇವಣಕರ್, ಎಲ್ ಕೆ ನಾಯ್ಕ ಯುವ ರಾಜ್ಯ ಸಮಿತಿಯ ಪ್ರತಿನಿಧಿ ಅಜಯ್ ಸಾವ್ಕಾರ್, ನಾಗರಾಜ ಹರಪನಹಳ್ಳಿ, ಯೋಗೇಶ್ ಶಾನಭಾಗ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.