ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯಪಾಲರಿಂದ ಪರಿಸ್ಥಿತಿ ವಿಕೋಪಕ್ಕೆ ತಮಿಳುನಾಡು ಸ್ಪೀಕರ್

ರಾಜ್ಯಪಾಲರಿಂದ ಪರಿಸ್ಥಿತಿ ವಿಕೋಪಕ್ಕೆ ತಮಿಳುನಾಡು ಸ್ಪೀಕರ್

Thu, 12 Jan 2023 14:57:43  Office Staff   Vb

ಚೆನ್ನೈ: ಸಾಂಪ್ರದಾಯಿಕವಾಗಿ ರಾಜ್ಯ ಸರಕಾರ ಸಿದ್ಧಪಡಿಸುವ ಭಾಷಣವನ್ನು ಓದುವ ವೇಳೆ, ಕೆಲವು ಭಾಗಗಳನ್ನು ಕೈಬಿಟ್ಟು ತನ್ನದೇ ಭಾಷಣವನ್ನು ಓದುವ ಮೂಲಕ ರಾಜ್ಯಪಾಲ ಆರ್.ಎನ್. ರವಿ “ಅಸಾಧಾರಣ ಪರಿಸ್ಥಿತಿಯೊಂದನ್ನು ಸೃಷ್ಟಿಸಿದರು ಎಂದು ಸ್ಪೀಕ‌ ಎಮ್. ಅಪ್ಪಾವು ಬುಧವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡುವ ಮೂಲಕ ರಾಜ್ಯಪಾಲರು ಹೊಸ ಸಂಪ್ರದಾಯವೊಂದನ್ನು ಸೃಷ್ಟಿಸಿದ್ದಾರೆ. ರಾಜ್ಯ ಸರಕಾರ ಅನುಮೋದಿಸಿದ ಭಾಷಣದ ಭಾಗಗಳನ್ನು ಮಾತ್ರ ದಾಖಲೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಸ್ಪೀಕರ್‌ರನ್ನು ಕೋರುವ ನಿರ್ಣಯವೊಂದನ್ನು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಮಂಡಿಸಿದ ಬಳಿಕ, ರಾಜ್ಯಪಾಲ ರವಿ ಕೋಪದಿಂದ ವಿಧಾನಸಭೆಯಿಂದ ಹೊರನಡೆದರು. ನಿರ್ಣಯವನ್ನು ಮಂಡಿಸಲು ಮುಖ್ಯಮಂತ್ರಿಗೆ ಅವಕಾಶ ನೀಡಿರುವ ತನ್ನ ಕ್ರಮವನ್ನು ಸ್ಪೀಕರ್ ಅಪ್ಪಾವು ಬುಧವಾರ ವಿಧಾನಸಭೆಯಲ್ಲಿ ಸಮ ರ್ಥಿಸಿಕೊಂಡರು.

'ರಾಜ್ಯಪಾಲರು ವಿಧಾನಸಭೆಯಲ್ಲಿ ಅಸಾಧಾರಣ ಪರಿಸ್ಥಿತಿಯೊಂದನ್ನು ಸೃಷ್ಟಿಸಿದರು. ಮುಖ್ಯಮಂತ್ರಿ ಸ್ಟಾಲಿನ್‌ರ ದಿಟ್ಟ ನಿರ್ಣಯವು ರಾಜ್ಯಪಾಲರ ಪಾತ್ರ ಏನೆಂಬುದನ್ನು ಇಡೀ ಭಾರತಕ್ಕೆ ಸ್ಪಷ್ಟಪಡಿಸಿತು” ಎಂದು ಅಪ್ಪಾವು ಹೇಳಿದರು.

ಮುಖ್ಯಮಂತ್ರಿ ಸ್ಟಾಲಿನ್ ಅಧಿಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಎಡಿಎಂಕೆ ಪ್ರತಿಭಟನೆ ನಡೆಸಿರುವ ನಡುವೆಯೇ ಸ್ಪೀಕರ್ ತನ್ನ ನಿಲುವನ್ನು ಸ್ಪಷ್ಟಪಡಿಸಿದರು.


Share: