ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯದಲ್ಲಿ ಕೆಟ್ಟ ಸರ್ಕಾರ ಬರಲು ಕಾಂಗ್ರೇಸ್ ಪಕ್ಷವೇ ಕಾರಣ- ಕುಮಾರ್ ಸ್ವಾಮಿ

ರಾಜ್ಯದಲ್ಲಿ ಕೆಟ್ಟ ಸರ್ಕಾರ ಬರಲು ಕಾಂಗ್ರೇಸ್ ಪಕ್ಷವೇ ಕಾರಣ- ಕುಮಾರ್ ಸ್ವಾಮಿ

Fri, 10 Feb 2023 06:17:11  Office Staff   SOnews

ಭಟ್ಕಳ: ರಾಜ್ಯದಲ್ಲಿಂದು ಅತ್ಯಂತ ಕೆಟ್ಟ ಸರ್ಕಾರ ಬರಲು ಕಾಂಗ್ರೇಸ್ ಪಕ್ಷದ ದುರಾಲೋಚನೆಯೇ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಹೇಳಿದರು.

ಅವರು ಗುರುವಾರ ಸಂಜೆ ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿಯ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಮಾವೇಶ ಉದ್ದೇಶಿ ಮಾತನಾಡಿದರು.

ರಾಜ್ಯದಲ್ಲಿ ಜೆ.ಡಿ.ಎಸ್. ಮುಗಿಸಬೇಕು ಎನ್ನುವ ದುರಾಸೆಯಿಂದ ಕಾಂಗ್ರೆಸ್ ಪಕ್ಷ ಮಾಡಿದ ಅಪಪ್ರಚಾರವೇ ಇಂದು ರಾಜ್ಯದಲ್ಲಿ ಅತ್ಯಂತ ಕೆಟ್ಟ ಬಿ.ಜೆ.ಪಿ. ಸರಕಾರ ಬರಲು ಕಾರಣವಾಗಿದೆ ಎಂದರು.

ಕಾಂಗ್ರೆಸ್ ಜೆ.ಡಿ.ಎಸ್ ನ್ನು ಮುಗಿಸಲು ಹೋಗಿ ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಿದೆ. ತಾಕತ್ತಿದ್ದರೆ ಬಿ.ಜೆ.ಪಿ.ಯನ್ನು ನೇರವಾಗಿ ಎದುರಿಸಿ ಎಂದು ಸವಾಲು ಹಾಕಿದ ಅವರು ಕಾಂಗ್ರೆಸ್ ಪಕ್ಷ ಜೆ.ಡಿ.ಎಸ್.ಗೆ ಮುಸ್ಲಿಮರು ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತಾವು ಒಮ್ಮೆ ಅನಿವಾರ್ಯವಾಗಿ ಬಿ.ಜೆ.ಪಿ. ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ತಮ್ಮ ಪಕ್ಷ ಮುಸ್ಲೀಮರ ಪರವಾಗಿಯೇ ಇದೆ ಎಂದು ಹೇಳಿದರು.

ಕಳೆದ ೧೪ ತಿಂಗಳು ಮುಖ್ಯ ಮಂತ್ರಿಯಾಗಿದ್ದಾಗ ಬಿ.ಜೆ.ಪಿ. ಪಕ್ಷವನ್ನು ಹಿಡತದಲ್ಲಿಟ್ಟುಕೊಂಡಿದ್ದರೂ ಸಹ, ಕಾಂಗ್ರೆಸ್ ವಿರೋಧ ಪಕ್ಷದ ನಾಯಕ (ಸಿದ್ದರಾಮಯ್ಯ ಅವರ ಹೆಸರು ಹೇಳದೇ) ಮುಂದಿನ ಮುಖ್ಯ ಆಗಬೇಕೆನ್ನುವ ಆಶೆಯಿಂದ ಬಿ.ಜೆ.ಪಿ.ಗೆ ಅಧಿಕಾರ ಹಿಡಿಯಲು ಸಹಾಯ ಮಾಡಿದರು ಎಂದು ಕಟುಕಿದರು.

ಭಟ್ಕಳ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮುಸ್ಲೀಮರಿದ್ದು ಓರ್ವ ಮುಸ್ಲಿಂ ಅಭ್ಯರ್ಥಿಯನ್ನು ಆರಿಸಿ ವಿಧಾನಸಭೆಗೆ ಕಳುಹಿಸುವುದ ದೊಡ್ಡದೇನಲ್ಲ. ನಾವು ತೀರ್ಮಾನ ಮಾಡಿದ್ದೇವೆ. ಈಗ ತೀರ್ಮಾನ ಮಾಡುವುದು ನಿಮಗೆ ಬಿಟ್ಟಿದೆ. ಒಮ್ಮದ ಅಭ್ಯರ್ಥಿಯನ್ನು ನಮಗೆ ಕೊಡಿ  ಗೆಲ್ಲಿಸುವ ಪ್ರಯತ್ನ ನಮ್ಮದು. ನಾವು ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಪರೋಕ್ಷವಾಗಿ ತಂಝೀಮ್ ನ ಒಮ್ಮತದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಕಾಂಗ್ರೆಸ್ ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ  ಮುಸ್ಲೀಮರು ಕಿವಿಗೊಡಬಾರದು ಎಂದ ಅವರು ಬಿಜೆಪಿಯವರಿಗೆ ಜನತೆ ವಿದ್ಯಾವಂತರಾಗುವುದು ಬೇಡವಾಗಿದೆ. ಜನತೆಯನ್ನು ಮತ್ತೆ ಮನುಸಿದ್ದಾಂತಕ್ಕೆ  ಕರೆದುಕೊಂಡು ಹೋಗುವುದು ಅವರ ಉದ್ದೇಶವಾಗಿದೆ.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಮ ಪಂಚಾಯತ್ಗೊಂದು ೩೦ ಹಾಸಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತೇವೆ. ವೈದ್ಯರು, ೩೦ ಸಿಬ್ಬಂದಿಗಳನ್ನು ಕೊಡುತ್ತೇನೆಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು  ಸಾವಿರಕ್ಕೆ ಮತ್ತು ವಿಧವಾ ವೇತನವನ್ನು ೨೫೦೦ಕ್ಕೆ ಏರಿಕೆ ಮಾಡಲಾಗುವುದು ಎಂದರು

ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಪ್ರಸ್ತಾವಿಕವಾಗಿ ಮಾತನಾಡಿದರು, ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಮಾತನಾಡಿದರು.

ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಮಾಜಿ ಎಮ್ಮೆಲ್ಸಿ ರಮೇಶ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜವರ್ಧನ್ ನಾಯ್ಕ, ಮುಖಂಡರಾದ ಗಣಪತಿ ಭಟ್ಟ, ಅಲ್ತಾಪ್ ಖರೂರಿ, ಕೃಷ್ಣಾನಂದ ಪೈ, ಪಾಂಡುರಂಗ ನಾಯ್ಕ, ಮಂಜು ಗೊಂಡ, ವೆಂಕಟೇಶ ನಾಯ್ಕ, ದೇವಯ್ಯ ನಾಯ್ಕ ಮುಂತಾದವರಿದ್ದರು. ಕುಂದಾಪುರ ಜೆಡಿಎಸ್ ಕ್ಷೇತ್ರಾಧ್ಯಕ್ಷ ಹುಸೇನ್ ಹೈಕಾಡಿ ನಿರೂಪಿಸಿದರು.


Share: