ಮಂಜೇಶ್ವರ ಮಾ. ಮಾ. ೦೪ ಗುರುವಾರ : ವರ್ಕಾಡಿ ಕಜೆ ಪದವು ಎಂಬಲ್ಲಿ ರೆವನ್ಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ೩೨೫ ಲೋಡ್ ಅಕ್ರಮವಾಗಿ ದಾಸ್ತಾನಿರಿಸಿದ್ದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಮುಟ್ಟುಗೋಲು ಹಾಕಿದ ಮರಳನ್ನು ವರ್ಕಾಡಿ ಮಜೀರ್ಪಳ್ಲ ಕೃಷಿ ವಿಶ್ವವಿದ್ಯಾನಿಲಯದ ಸಬ್ ಸೆಂಟರ್ ಬಳಿ ದಾಸ್ತಾನಿರಿಸಲಾಗಿದೆ.
ಬುಧವಾರ ಬೆಳಿಗ್ಗೆ ಡೆಪ್ಯೂಟಿ ತಹಸೀಲ್ದಾರ್ ಎ.ದಾಮೋದರನ್ , ಕೊಡ್ಲಮೊಗರ್ ಪ್ರತ್ಯೇಕ ಗ್ರಾಮಾಧಿಕಾರಿ ಎ.ಮುಹಮ್ಮದ್ ಕುಞ್ಞ, ಕಡಂಬಾರ್ ಪ್ರತ್ಯೇಕ ಗ್ರಾಮಾಧಿಕಾರಿ ಕಿರಣ್ ಕುಮಾರ್ ಶೆಟ್ಟಿ ನೇತೃತ್ವದ ತಂಡ ಮರಳನ್ನು ವಶಕ್ಕೆ ತೆಗೆದುಕೊಂಡಿದೆ. ೧೪ ಟಿಪ್ಪರ್ ಹಾಗೂ ಒಂದು ಜೆ.ಸಿ.ಬಿ ಸಹಾಯದಿಂದ ಈ ಮರಳನ್ನು ಪೋಲೀಸ್ ಫ್ಲೈಯಿಂಗ್ ಸ್ಕಾಡ್ ಹಾಗೂ ಮಂಜೇಶ್ವರ ಪೋಲೀಸರ ಸಹಾಯದಿಂದ ದಸ್ತಗಿರಿ ಮಾಡಿದ ಮರಳನ್ನು ಮಜೀರ್ಪಳ್ಲ ಕೃಷಿ ವಿಶ್ವವಿದ್ಯಾನಿಲಯದ ಸಬ್ ಸೆಂಟರ್ಗೆ ತರಲಾಯಿತು. ಕೆಲವು ದಿನಗಳ ಹಿಂದೆ ವರ್ಕಾಡಿ ಧರ್ಮನಗರ ಬಳಿಯಿಂದ ಸುಮಾರು 500 ಲೋಡು ಮರಳನ್ನು ವಶಪಡಿಸಿಕೊಳ್ಲಲಾಗಿತ್ತು. ಈ ಮರಳನ್ನು ವರ್ಕಾಡಿ ಗ್ರಾಮ ಪಂಚಾಯತ್ ಕಚೇರಿ ಗ್ರೌಂಡಿನಲ್ಲಿರಿಸಲಾಗಿದೆ. ವರ್ಕಾಡಿ, ಮೀಂಜ ಪಂಚಾಯತ್ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಟನ್ ಗಟ್ಟಲೆ ಮರಳನ್ನು ಮರಳು ಮಾಫಿಯಾ ನಖಲಿ ಪಾಸ್ ನಿರ್ಮಿಸಿ ದಾಸ್ತಾನಿರಿಸಲಾಗಿತ್ತು. ಮರಳು ಬೇಟೆ ನಡೆಯುತ್ತಿದ್ದರೂ ಕರ್ನಾಟಕದಿಂದ ಪೆರ್ಲ ,ಬದಿಯಡ್ಕ, ಮುಳ್ಳೇರಿಯಾ ದಾರಿಯಾಗಿ ಕೇರಳಕ್ಕೆ ವ್ಯಾಪಕ ಮರಳು ಸಾಗಾಟ ನಡೆಯುತ್ತಿದ್ದರೂ ಅಧಿಕೃತ ವರ್ಗ ಮೌನ ಪಾಲಿಸುತ್ತಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ವರ್ಕಾಡಿ ಪಂಚಾಯತ್ನಿಂದ ಮಾತ್ರ ವಶಪಡಿಸಿಕೊಂಡ ಮರಳಿನಿಂದ ರಾಜ್ಯ ಸರಕಾರದ ಖಜಾನೆಗೆ ಸುಮಾರು ೧೭.೫೦.೦೦೦ ರೂ ತುಂಬಲಿದ್ದು. ಮುಟ್ಟುಗೋಳು ಹಾಕಿದ ಮರಳನ್ನು ಇ.ಎಂ.ಎಸ್ ಮನೆ ನಿರ್ಮಾಣದಡಿ ನಿರ್ಮಿಸುವ ಮನೆಗಳಿಗೆ ನೀಡಲು ತೀರ್ಮಾನಿಸಿದ ಬಗ್ಗೆ ತಿಳಿದುಬಂದಿದೆ.
ಆರಿಫ್ ಮಚ್ಚಂಪಾಡಿ,ಮಂಜೇಶ್ವರ