ಭಟ್ಕಳ:ಬಟ್ಟೆ ಅಂಗಡಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತೇನೆ ಎಂದು ಹೇಳಿದ ಓರ್ವ ಯುವತಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.
ಗೀತಾ ರಾಮ ದೇವಾಡಿಗ ೧೯ ವರ್ಷ ಶಿರಾಲಿ ಮಾವಿನಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ.
ಇಲ್ಲಿನ ಶಿರಾಲಿ ಜಯಲಕ್ಷ್ಮಿ ಬಟ್ಟೆ ಅಂಗಡಿಯಿಂದ ಕೆಸಲ ಮುಗಿಸಿ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಮನೆಗೂ ಹೋಗದೇ ನಾಪತ್ತೆಯಾಗಿದ್ದಾಳೆ ಮನೆಗೆ ಮರಳಿ ಬಂದಿಲ್ಲ ಎಂದು ಕಾಣೆಯಾದ ಯುವತಿಯ ತಾಯಿ ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿ ಕೊಂಡ ಪಿಎಸೈ.ಭರತಕುಮಾರ ವಿ,ತನಿಖೆ ಕೈಗೊಂಡಿದ್ದಾರೆ.