ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಪತ್ತೆ

ಬಂಟ್ವಾಳ: ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶವ ಪತ್ತೆ

Tue, 05 Jan 2010 02:53:00  Office Staff   S.O. News Service
ಬಂಟ್ವಾಳ, ಜನವರಿ 4: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿಯ ಶವ ಚೆವೈನ ರೇಲ್ವೇಹಳಿಯಲ್ಲಿ ಪತ್ತೆಯಾಗಿದೆ.
 
ಮೃತ ಬಾಲಕನನ್ನು ಬಂಟ್ವಾಳ ಎಪಿ‌ಎಂಸಿ ಸದಸ್ಯ,ವಕೀಲ ಬರಿಮಾರು ಅಶೋಕ್ ಕುಮಾರ್ ರ ಪುತ್ರ ಅಕ್ಷಯ ಕುಮಾರ್{14} ಎಂದು ಗುರುತಿಸಲಾಗಿದೆ. ಮಾಣಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಈತ ಕಳೆದ ಎರಡು ದಿನದ ಹಿಂದೆ ಮನೆಯಿಂದ ತೆರಳಿದಾತ ನಾಪತ್ತೆಯಾಗಿದ್ದ. ಈ ಬಗ್ಗೆ ಅಶೋಕ್ ಕುಮಾರ್ ರವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.  ಆತನ ಮೊಬೈಲ್‌ಗರ ಕರೆ ಮಾಡಿದಾಗ ಅದರಲ್ಲಿ ಆತ ಚೆನೈನಲ್ಲಿರುವುದು ಗೊತ್ತಾಗಿದೆ. ಈ ಸುಳಿವನ್ನು ಆಧರಿಸಿ ಚೆನೈಗೆ ತೆರಳಿದ ಪೋಲಿಸರಿಗೆ ಅಲ್ಲಿನ ರೇಲ್ವೇ ಹಳಿಯಲ್ಲಿ ಪತ್ತೆಯಾಗಿರುವ ಶವವೊಂದು ಅಕ್ಷಯ್ ಕುಮಾರ ನದ್ದು ಎಂದು ತಿಳಿದಿದ್ದು,ಮನೆಮಂದಿಯೂ ಇದನ್ನು ಧೃಡಪಡಿಸಿದ್ದಾರೆ.




Share: